ಚಂದನವನದಲ್ಲಿ ಸೆಟ್ಟೇರಲಿದೆ ರೋಹಿಣಿ ಸಿಂಧೂರಿ ಬಯೋಪಿಕ್ Rohini Sindhuri
ಮಂಡ್ಯ : ದಕ್ಷ ಐಎಎಸ್ ಅಧಿಕಾರಿ ಅಂತಲೇ ಹೆಸರುವಾಸಿಯಾಗಿರುವ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಯೋಪಿಕ್ ಸಿನಿಮಾ ಸೆಟ್ಟೇರಲಿದೆ.
ಚಿತ್ರಕ್ಕೆ “ಭಾರತ ಸಿಂಧೂರಿ” ಎಂದು ಟೈಟಲ್ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ ಎಂದು ವರದಿಯಾಗಿದೆ.
ಕೃಷ್ಣ ಸ್ವರ್ಣಸಂದ್ರ ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು ಈ ಸಿನಿಮಾದ ಸಿಂಧೂರಿ ಪಾತ್ರಕ್ಕೆ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ.
ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡಲಿದೆ ಎಂದು ತಿಳಿದುಬಂದಿದೆ.