Rohini Sindhuri : ಪತಿ ವಿರುದ್ಧ ಜಮೀನು ಕಬಳಿಕೆ ಆರೋಪ – ಆರಗ ಜ್ಞಾನೇಂದ್ರರ ಪ್ರತಿಕ್ರಿಯೆ
ರೋಹೊಣಿ ಸಿಂಧೂರಿ ಪತಿ ವಿರುದ್ಧ ಕೇಳಿ ಬಂದಿರುವ ಜಮೀನು ಕಬಳಿಕೆ ಆರೋಪಮ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಈ ವಿಚಾರವನ್ನು ನಾನು ನೋಡಿದ್ದೇನೆ. ಯಾವ ಕಾರಣಕ್ಕೆ ಪೊಲೀಸ್ ದೂರು ಸ್ವೀಕರಿಸಲು ನಿರಾಕರಿಸಿದ್ದರು. ಯಾವ ಪೊಲೀಸ್ ಠಾಣೆ ಅನ್ನೊ ಬಗ್ಗೆ ಮಾಹಿತಿ ತರಿಸಿಕೊಳ್ಳೊತ್ತೇನೆ. ಈ ಬಗ್ಗೆ ಡಿಜಿ ಜೊತೆ ನಾನು ಮಾತನಾಡುತ್ತೇನೆ ಎಂದಿದ್ದಾರೆ..
IAS ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರ ಪತಿ ವಿರುದ್ಧ ಜಮೀನು ಕಬಳಿಕೆ ಆರೋಪ ಕೇಳಿಬಂದಿದೆ..
ರೋಹಿಣಿ ಸಿಂಧೂರಿ ಅವರ ಪತಿಯಿಂದ ತನ್ನ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ, ಕಮಿಡಿಯನ್ ಮಹಮೂದ್ ಅಲಿ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಟ್ವೀಟ್ ಮಾಡಿ ದೂರು ನೀಡಿದ್ದಾರೆ.
ಸುಧೀರ್ ರೆಡ್ಡಿ ಹಾಗು ಮಧು ರೆಡ್ಡಿ ಎಂಬುವವರಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಲಕ್ಕಿ ಆಲಿ ಆರೋಪಿಸಿದ್ದಾರೆ. ಯಲಹಂಕ ಬಳಿ ಇರುವ ಕೆಂಚೇನಹಳ್ಳಿ ಬಳಿಯ ಲಕ್ಕಿ ಆಲಿ ಅವರ ಪ್ರಾಪರ್ಟಿಯನ್ನು ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಸಹಾಯದಿಂದ ಜಾಗ ಒತ್ತುವರಿಯಾಗಿದೆ ಎನ್ನಲಾಗುತ್ತಿದೆ.