Rohini Sindhuri | ಸಂಕಷ್ಟಕ್ಕೆ ಸಿಲುಕಿದ ರೋಹಿಣಿ ಸಿಂಧೂರಿ
ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನಡೆದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು, ಮಾರುಕಟ್ಟೆಯಲ್ಲಿ 10 ರಿಂದ 13 ರುಪಾಯಿಗೆ ಸಿಗುವ ಬ್ಯಾಗ್ ಗಳನ್ನು ಜಿಲ್ಲಾಧಿಕಾರಿಗಳು 52 ರೂಪಾಯಿ ನೀಡಿ ಖರೀದಿಸಿದ್ದರು. ಇದರಿಂದ ಸಾರ್ವಜನಿಕರ ಹಣ ವ್ಯರ್ಥ ಮಾಡಲಾಗಿದೆ. ಅಲ್ಲದೇ ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್ಗಳನ್ನು ಖರೀದಿಸಲಾಗಿತ್ತು ಎಂದು ದೂರಿದ್ದರು.
ಅಲ್ಲದೇ 14.17 ಲಕ್ಷ ಮೊತ್ತದ ಬಟ್ಟೆ ಬ್ಯಾಗ್ ಗಳನ್ನು ರೋಹಿಣಿ ಸಿಂಧೂರಿಯವರು 14 ಕೋಟಿ ಮೊತ್ತಕ್ಕೆ ಖರೀದಿಸಿದ್ದು, 6.18 ಕೋಟಿ ಅವ್ಯವಹಾರ ನಡೆದಿದೆ ಎಂದು ಸಾ.ರಾ.ಮಹೇಶ್ ಆರೋಪಿಸಿದ್ದರು.
ಆಗ ಈ ಆರೋಪವನ್ನು ರೋಹಿಣಿ ಸಿಂಧೂರಿ ಅವರು ತಳ್ಳಿ ಹಾಕಿದ್ದರು. ಶಾಸಕರ ಆರೋಪ ಆಧಾರರಹಿತ ಎಂದಿದ್ದರು. ಇದೀಗ ಈ ಪ್ರಕರಣದ ತನಿಖಿಗೆ ರಾಜ್ಯ ಸರ್ಕಾರ ಆದೇಶಿಸಿದೆ. Rohini Sindhuri in trouble over Cloth Bag Buying Scam