ರೋಹಿಣಿ ಸಿಂಧೂರಿ ಬೇಸಿಕ್ ನಾಲೆಡ್ಜ್ ಇಲ್ಲದ ಐಎಎಸ್ ಅಧಿಕಾರಿ : ರಘು ಆಚಾರ್
ಮೈಸೂರು : ಡಿಸಿ ರೋಹಿಣಿ ಸಿಂಧೂರಿ ಐಎಎಸ್ ಪಾಸ್ ಮಾಡಿದ್ದಾರಾ ಎಂಬುದೇ ನನಗೆ ಅನುಮಾನ. ಅವರಿಗೆ ಬೇಸಿಕ್ ನಾಲೆಡ್ಜ್ ಇಲ್ಲ ಎಂದು ಶಾಸಕ ಎಚ್.ಪಿ.ಮಂಜುನಾಥ್ ಪರವಾಗಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಬೇಸಿಕ್ ನಾಲೆಡ್ಜ್ ಇಲ್ಲದ ಐಎಎಸ್ ಅಧಿಕಾರಿ.
ಅವರಿಗೆ ಜನಪ್ರತಿನಿಧಿಗಳ ಬಳಿ ಶಿಷ್ಟಾಚಾರದಿಂದ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ಶಾಸಕಾಂಗ ಶಾಸನ ರೂಪಿಸುತ್ತದೆ. ಕುರುಬ ಅಭಿವೃದ್ಧಿ ಪ್ರಾಧಿಕಾರ ರಚಿಸಿ 500 ಕೋಟಿ ನೀಡಿ : ಹೆಚ್.ವಿಶ್ವನಾಥ್
ಶಾಸನಗಳನ್ನು ಕಾರ್ಯರೂಪಕ್ಕೆ ತರುವುದು ಕಾಯಾರ್ಂಗದ ಕೆಲಸ, ಇದು ಆಗದಿದ್ದಲ್ಲಿ ನ್ಯಾಯಾಂಗಕ್ಕೆ ಹೋಗಬೇಕು. ಸಂವಿಧಾನದ ಈ ಮೂರು ಅಂಗಗಳನ್ನು ಡಿಸಿ ಮರೆತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಶಾಸಕರಿಗೆ ಪತ್ರ ತಲುಪುವ ಮುನ್ನವೇ ಸೋಷಿಯಲ್ ಮಿಡಿಯಾಗೆ ಹೇಗೆ ಹೋಯಿತು ಎಂದು ಪ್ರಶ್ನಿಸಿದ ರಘು ಆಚಾರ್, ನಿಮ್ಮ ಕಚೇರಿಯ ಸಿಬ್ಬಂದಿಯಿಂದ ಹೋಯಿತೇ? ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೂಡಲೇ ಶಾಸಕರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಹಾಗೇ ಇನ್ನು ಮೂರು ದಿನಗಳಲ್ಲಿ ರೋಹಿಣಿ ಸಿಂಧೂರಿ ಕ್ಷಮೆ ಕೇಳದಿದ್ದರೇ ಹಕ್ಯಚ್ಯುತಿ ಮಂಡೆನೆ ಮಾಡುತ್ತೇನೆ. ಈ ಘಟನೆಯಿಂದ ಮಂಜುನಾಥ್ ಅವರಿಗೆ ಅಪಮಾನವಲ್ಲ, ಶಾಸಕರಿಗೆ ಆದ ಅಪಮಾನ. ಮಂಗಳೂರಿನಲ್ಲಿ ಉಗ್ರ ಸಂಘಟನೆ ಬೆಂಬಲಿಸಿ ಬರಹ : ಕಟೀಲ್ ಹೇಳಿದ್ದೇನು..?
ಕೌನ್ಸಿಲಿಂಗ್ ಗೆ ಬಂದು ಉತ್ತರ ಕೊಡಲಿ, ಜನಪ್ರತಿನಿಧಿಗಳು ಅಂದರೆ ಕಡೆಗಣಿಸೋದು ಎಂದುಕೊಡಿದ್ದೀರಾ? ನಾನು ಅಲ್ಲಿ ಉತ್ತರ ಕೊಡುತ್ತೇನೆ ಬನ್ನಿ ಎಂದ ಸವಾಲ್ ಹಾಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel