ರೋಹಿತ್ ಭಾರದ್ವಾಜ್… ಆಧುನಿಕ ಮಹಾಭಾರತದ ಧರ್ಮರಾಯ

ಇಂದ್ರ ಪ್ರಸ್ಥದ ನಂತರ ಹಸ್ತಿನಾಪುರದ ಅರಸನಾಗಿ, ಬದುಕಿರುವ ತನಕವೂ ಸತ್ಯ, ಧರ್ಮವನ್ನು ಪಾಲಿಸಿದ ಪಾಂಡು ಪುತ್ರ ಧರ್ಮರಾಜ ಯುಧಿಷ್ಠಿರನ ಧರ್ಮಪಾಲನೆ ಹಿಂದೆಯೂ, ಈಗಲೂ ಹಾಗೂ ಬರುವ ಶತಮಾನಗಳಲ್ಲೂ ಜನರಿಗೆ ಮಾದರಿ. ಪ್ರಸ್ತುತ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯುದಿಷ್ಠಿರನ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಇವರ ನಿಜವಾದ ಹೆಸರು ರೋಹಿತ್ ಭಾರದ್ವಾಜ್. ರೀಲ್ ಲೈಫ್ ನಲ್ಲಿ ಅತ್ಯಂತ ಸರಳತೆಯನ್ನ ಮೈಗೂಡಿಸಿಕೊಂಡು ಧರ್ಮಪಾಲಕನೆನಿಸಿಕೊಂಡಿರುವ ಧರ್ಮರಾಜನ ರಿಯಲ್ ಲೈಫ್ ಜರ್ನಿಯ ಕೆಲ ಇಂಟರೆಸ್ಟಿAಗ್ ವಿಚಾರಗಳು ಇಲ್ಲಿವೆ ನೋಡಿ…
ರೀಲ್ ನಲ್ಲಿ ಧರ್ಮರಾಜನಾಗಿ ಮಿಂಚಿ ಮನೆಮಾತಾಗಿರುವ ಧರ್ಮರಾಜ ಅಂದ್ರೆ ರೋಹಿತ್ ಭಾರದ್ವಾಜ್ ಅವರು ಜನಿಸಿದ್ದು ಜನವರಿ ೩೦ ೧೯೮೩ರಲ್ಲಿ. ಇವರು ಮೂಲತಹ ಪಂಜಾಬ್ ನ ಅಮೃತ್ ಸರದವಾರದ ರೋಹಿತ್ ವಿದ್ಯಾಭ್ಯಾಸವನ್ನು ಅಮರತ್ ಸರದಲ್ಲೇ ಮುಗಿಸಸಿಕೊಂಡಿದ್ದಾರೆ. ರೋಹಿತ್ ತಮ್ಮ ಬಾಲ್ಯದ ಗೆಲತಿಯಾದ ಪೂಣಮ್ ಎಂಬುವವರನ್ನ ಮದುವೆಯಾಗಿದ್ದು, ಇವರಿಗೆ ಪೃಥ್ವಿ ಬಾರದ್ವಾಜ್ ಎಂಬ ಮುದ್ದಾದ ಮಗಳಿದ್ದಾಳೆ. ಪ್ರಸ್ತುತ ರೋಹಿತ್ ಮುಂಬೈನಲ್ಲಿ ತಮ್ಮ ಪರಿವಾರದೊಂದಿಗೆ ನೆಲೆಸಿದ್ದಾರೆ.
೨೦೦೮ ರಣಬೀರ್ ರಾಣೋ ಸಿನೆಮಾದ ಮೂಲಕ ಕಿರುತೆರೆಯಲ್ಲಿ ಕೆರಿಯರ್ ಶುರುಮಾಡಿದ ರೋಹಿತ್ , ಬಾತ್ ಹಮಾರಿ ಪಕ್ಕೀ ಹೇ, ನಾ ಬೋಲೆ ತುಮ್ ನಾ ಮೇನೆ ಕುಚ್ ಕುಚ್ ಕಹಾ, ನವ್ಯಾ ಧಾರವಾಹಿಗಳಲ್ಲಿ ಸಪೋರ್ಟಿಂಗ್ ರೋಲ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ರೋಹಿತ್ ಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟ ಪಾತ್ರವೆಂದ್ರೆ ೨೦೧೩ರಲ್ಲಿ ಮೂಡಿಬಂದ ಮಹಾಭಾರತದ ಯುದಿಷ್ಠಿರನ ಪಾತ್ರ. ಧರ್ಮರಾಜನಾಗಿ ಯುದಿಷ್ಠಿರನ ಪಾತ್ರಕ್ಕೆ ಜೀವತುಂಬಿ ಜನರ ಪ್ರೀತಿ ಗಳಿಸಿದ ರೋಹಿತ್, ಇಂಡೋನೇಷ್ಯಾದ ರಿಯಾಲಿಟಿ ಶೋ ನ್ಯೂ ಈಟ್ ಬುಲಾಗಾದಲ್ಲಿ ಆಂಕರ್ ಕಮ್ ಜಡ್ಜ್, ಬಾಲಿ ಸ್ಟಾರ್ ವಗಾನ್ಜಾದಲ್ಲಿ ಸ್ರ್ಧಿ ಹಾಗೂ ಜಡ್ಜ್ ಸಹ ಆಗಿದ್ದರು.
ಕಿರುತೆತೆಯ ಹೊರತಾಗಿ ವಾಪ್ಸಿ, ಮುಂಬೈ, ಮೊಂಬತ್ತಿ ಸೇರಿ ಕೆಲ ಚಿತಗಳಲ್ಲಿ ರೋಹಿತ್ ಕಾಣಿಸಿಕೊಂಡಿದ್ದಾರೆ. ಮಹಾಬಾರತದಲ್ಲಿ ಯುದಿಷ್ಠಿರನ ಪಾತ್ರಕ್ಕೆ ಬೆಸ್ಟ್ ಆಕ್ಟಿಂಗ್ ಸಪರ್ಟಿಂಗ್ ರೋಲ್ ಅವಾರ್ಡ್, ಆಸ್ಟೊವರ್ಡ್ ಸೀರೀಸ್ ನಲ್ಲಿ ಬೆಸ್ಟ್ ಆಕ್ಟರ್ ಅವಾರ್ಡ್ ಗೂ ನಾಮಿನೇಟ್ ಆಗಿದ್ದರು.








