Rohit sharma | ನಾನೇ ಸರ್ಪೈಸ್ ಆಗಿದ್ದೆ.. ರೋಹಿತ್ ಹೀಗೆ ಹೇಳಿದ್ದು ಯಾಕೆ ?
ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ್ ವೇದಿಕೆಯಾಗಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕ್ಯಾಪ್ಟನ್ಸ್ ಇನ್ನಿಂಗ್ಸ್ ಆಡಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಕಡೆಯಲ್ಲಿ ರೋಹಿತ್ ಶರ್ಮಾ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈಯುತ್ತಿದ್ದರು.
ಕ್ಯಾಪ್ಟನ್ ರೋಹಿತ್ ಶರ್ಮಾ ಆರಂಭಿಸಿದ್ರೆ, ದಿನೇಶ್ ಕಾರ್ತಿಕ್ ತಮ್ಮದೇಯಾದ ಶೈಲಿಯಲ್ಲಿ ಮ್ಯಾಚ್ ಫಿನಿಷ್ ಮಾಡಿದರು.
ಕೊನೆಯ ಓವರ್ ನಲ್ಲಿ 9 ರನ್ ಗಳು ಬೇಕಾಗಿದ್ದ ಸಮಯದಲ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಹೀಗಾಗಿ ಪಂತ್ ಗೂ ಮುನ್ನಾ ದಿನೇಶ್ ಅವರನ್ನು ಕ್ರೀಸ್ ಗೆ ಕಳುಹಿಸಿದ್ದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ರೋಹಿತ್ ಶರ್ಮಾ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದು, ಹಾರ್ದಿಕ್ ಔಟ್ ಆದ ಬಳಿಕ ಕೊನೆಯ ಔವರ್ ನಲ್ಲಿ ಪಂತ್ ಅಥವಾ ದಿನೇಶ್ ಕಾರ್ತಿಕ್ ನಲ್ಲಿ ಯಾರು ಬ್ಯಾಟಿಂಗ್ ಬರಬೇಕು ಅನ್ನೋ ವಿಚಾರವಾಗಿ ನಾನು ಸ್ವಲ್ಪ ಗೊಂದಲದಲ್ಲಿದೆ.

ಆದ್ರೆ ಕೊನೆ ನನ್ನ ದೃಷ್ಠಿ ಕಾರ್ತಿಕ್ ಮೇಲೆ ಬಿತ್ತು. ಯಾಕಂದರೇ ಟಿ 20 ವಿಶ್ವಕಪ್ ನಲ್ಲಿ ಆತ ನಮಗೆ ಫಿನಿಷರ್ ಆಗಿ ಉಪಯೋಗಕ್ಕೆ ಬರುತ್ತಾರೆ.
ಈ ಸಮಯದಲ್ಲಿ ಕಾರ್ತಿಕ್ ಬೇಕು ಅಂತಾ ಅನಿಸಿತ್ತು. ಅದಕ್ಕಾಗಿಯೇ ಪಂತ್ ಗಿಂತ ಮೊದಲು ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಗೆ ಬಾ ಎಂದೆ ಎಂದರು.
ಇನ್ನು ನನ್ನ ಬ್ಯಾಟಿಂಗ್ ನೋಡಿ ನನಗೆ ಸರ್ ಪ್ರೈಸ್ ಅನಿಸಿತು. ಕಳೆದ 8 – 9 ತಿಂಗಳನಿಂದ ಇಂತಹ ಹಿಟ್ಟಿಂಗ್ ಗಾಗಿ ಕಾಯುತ್ತಿದ್ದೆ.
ಆಕ್ರಮಣಕಾರಿಯಾಗಿ ಆಡಬೇಕು ಅಂತಾ ಅಂಂದುಕೊಂಡಿರಲಿಲ್ಲ. ಕೊಂಚ ನಿಧಾನವಾಗಿ ಆಡುತ್ತಾ ಬ್ಯಾಟ್ ಗೆ ಕೆಲಸ ಕೊಡಬೇಕು ಎಂದುಕೊಂಡಿದ್ದೆ.
ಆದ್ರೆ 8 ಓವರ್ ಗಳ ಮ್ಯಾಚ್ ಆಗಿದ್ದರಿಂದ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಬೇಕಾಗಿತ್ತು. ರನ್ ಗಳಿಗಿಂತ ಬೌಂಡರಿ, ಸಿಕ್ಸರ್ ಗಳ ಮೇಲೆ ಹೆಚ್ಚು ದೃಷ್ಟಿ ಇಟ್ಟಿದ್ದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.








