ಹ್ಯಾಟ್ರಿಕ್ ಸೋಲಿಗೆ ಕೆಂಗೆಟ್ಟ ಮುಂಬೈ – ಸಿಟ್ಟಿಗೆದ್ದ ರೋಹಿತ್
5 ಬಾರಿಯ ಚಾಂಪಿಯನ್ ತಂಡ, ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ ಕೆಂಗೆಟ್ಟಿದೆ. ಐಪಿಎಲ್ 2022 ರ 15 ನೇ ಸೀಜನ್ ಹ್ಯಾಟ್ರಿಕ್ ಸೋಲುಂಡು ಮುಂಬೈ ಆಘಾತಕ್ಕೊಳಗಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಮುಂಬೈ ಸಂಪೂರ್ಣ ವೈಫಲ್ಯ ಅನುಭವಿಸಿತು. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ಗೆ 161 ರನ್ ಗಳಿಸಿತು. ಪ್ರತಿಯಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ ಹಾಗೂ ಕಮ್ಮಿನ್ಸ್ ಅಬ್ಬರದ ಆಟಕ್ಕೆ ತಲೆಬಾಗಿದ ಮುಂಬೈ 16ನೇ ಓವರ್ ನಲ್ಲೆ ಜಯವನ್ನ ಕೆಕೆಆರ್ ಗೆ ದಯಪಾಲಿಸಿತು.
ಪಂದ್ಯ ಸೋತಿದ್ದಕ್ಕೆ ರೋಹಿತ್ ಶರ್ಮಾ ಅಸಹನೆ ವ್ಯಕ್ತಪಡಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡುವ ವೇಳೆ ಇದು ಎಲ್ಲರ ಕಣ್ಣಿಗೆ ಕಂಡುಬಂತು. ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಮುಂಬೈ ನಾಯಕ ರೋಹಿತ್ ಶರ್ಮಾ ಸ್ವತಃ ಅವರೇ ಫಾರ್ಮ್ನಲ್ಲಿಲ್ಲ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸಂಟೇಷನ್ ವೇಳೆ ರೋಹಿತ್ ಸಿಟ್ಟಿಗೆದ್ದ ಘಟನೆಯೂ ನಡೆಯಿತು.
First time saw Rohit getting emotional in post match presentation.
Man you guys have won 5 trophies for us.#kkrvmi #RohitSharma #MumbaiIndians pic.twitter.com/bjtnYdQOHp
— Saurabh Raghav
(@TheRohitianboy) April 7, 2022
“ಕಾಮೆಂಟೇಟರ್ ಪ್ರಶ್ನೆಗಳು ಸರಿಯಾಗಿ ಕೇಳುತ್ತಿಲ್ಲ, ವಾಲ್ಯುಮ್ ಜಾಸ್ತಿ ಮಾಡಿ” ಎಂದು ಕೋಪದಿಂದ ಹೇಳಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.