Rohit-Virat | ರೋಹಿತ್ ಅಸಹನೆ.. ವಿರಾಟ್ ಸಲಹೆ..
ಡಿಆರ್‌ಎಸ್ ವಿಚಾರದಲ್ಲಿ ರೋಹಿತ್ ಶರ್ಮಾ ಮುಟ್ಟಿದೆಲ್ಲಾ ಚಿನ್ನವಾಗಿತ್ತು. ರೋಹಿತ್, ರಿವ್ಯೂ ತೆಗೆದುಕೊಂಡ ಪ್ರತಿ ಬಾರಿಯೂ ಧನಾತ್ಮಕವಾದ ಫಲಿತಾಂಶ ಬರುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ರೋಹಿತ್ ಅವರನ್ನ ಡಿಆರ್ ಎಸ್ ಕಿಂಗ್ ಎನ್ನುತ್ತಿದ್ದಾರೆ.
ಏಕದಿನ ಸಿರೀಸ್ ನ ಒಂದು ಪಂದ್ಯದಲ್ಲಿ ರೋಹಿತ್ ಶರ್ಮಾ, ಡಿಆರ್ ಎಸ್ ವಿಷಯದಲ್ಲಿ ಕೊಹ್ಲಿ ಸಲಹೆ ಪಡೆದು ರಿವ್ಯೂ ಕೇಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ವಿಕೆಟ್ ಕೀಪರ್ ರಿಷಬ್ ಪಂತ್ ಮಾತು ಕೇಳದೇ ವಿರಾಟ್ ಕೊಹ್ಲಿ ಸಲಹೆಗೆ ರೋಹಿತ್ ಜೈ ಎಂದಿದ್ದರು.
ಇನ್ನು ಟಿ 20 ಸರಣಿಯ ಮೊದಲ ಪಂದ್ಯದಲ್ಲೂ ರೋಹಿತ್ ಶರ್ಮಾ ಮತ್ತೆ ವಿರಾಟ್ ಕೊಹ್ಲಿ ಸಲಹೆ ಪಡೆದು ರಿವ್ಯೂ ಕೇಳಿದ್ದು, ಫಲಿತಾಂಶ ಋಣಾತ್ಮಕವಾಗಿ ಬಂತು.
ಆದ್ರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನಂದರೇ ರೋಹಿತ್ ಮತ್ತು ವಿರಾಟ್ ಕೊಹ್ಲಿಯ ಸಂಬಂಧ ಮತ್ತು ರೋಹಿತ್, ವಿರಾಟ್ ಕೊಹ್ಲಿ ಮೇಲೆ ಇಟ್ಟಿರುವ ನಂಬಿಕೆ..!!
ವಿಷಯಕ್ಕೆ ಹೋಗುವುದಾದರೆ.. ಇನಿಂಗ್ಸ್ ನ 8ನೇ ಓವರ್ ನಲ್ಲಿ ಬಿಷ್ಣೋಯ್ ಎಸೆತದಲ್ಲಿ ಚೆಂಡು ರೋಸ್ಟನ್ ಚೇಸ್ ಗೆ ತಾಗಿ ಕೀಪರ್ ಪಂತ್ ಕೈ ಸೇರಿತು. ರವಿ ಬಿಷ್ಣೋಯ್, ಪಂತ್ ಔಟ್ ಗೆ ಮನವಿ ಮಾಡಿದರು.
ಆದರೆ, ಅಂಪೈರ್ ಅದನ್ನು ವೈಡ್ ಬಾಲ್ ಎಂದು ಘೋಷಿಸಿದರು. ಇದರೊಂದಿಗೆ ರೋಹಿತ್ ಅಂಪೈರ್ ವಿರುದ್ಧ ಅಸಹನೆ ವ್ಯಕ್ತಪಡಿಸಿದರು. ಅಷ್ಟರಲ್ಲಿ ಕೊಹ್ಲಿ ಅಲ್ಲಿಗೆ ಬಂದರು. ಆಗ ರಿವ್ಯೂಗೆ ಹೋಗಬೇಕಾ ಎಂದು ಕೊಹ್ಲಿಯನ್ನು ರೋಹಿತ್ ಕೇಳಿದರು.
ಕೊಹ್ಲಿ ಬಾಲ್ ಚೇಸ್ ಬ್ಯಾಟ್ ಜೊತೆಗೆ ಪ್ಯಾಡ್ ಗೆ ತಾಕಿದಂತೆ ಸೌಂಡ್ ಬಂತು ಅಂತಾ ಹೇಳಿದರು. ರೋಹಿತ್, ಕೊಹ್ಲಿ ಮೇಲೆ ವಿಶ್ವಾಸವಿಟ್ಟು ರಿವ್ಯೂ ಕೇಳಿದರು.
ಆದರೆ ಪ್ರತ್ಯುತ್ತರವಾಗಿ ಚೆಂಡು ಎಲ್ಲೂ ಚೇಸ್ ಬ್ಯಾಟ್ ಗೆ ತಾಕುವಂತೆ ಕಾಣಲಿಲ್ಲ. ಅಂಪೈರ್ ಚೇಸ್ ನಾಟೌಟ್ ಎಂದು ಘೋಷಿಸಿದರು.
ಇದರೊಂದಿಗೆ ವಿರಾಟ್ ಕೊಹ್ಲಿ, ಪಂತ್, ರೋಹಿತ್ ಶರ್ಮಾ ಅವರನ್ನ ನೋಡುತ್ತಾ ಹೋಯ್ತು,. ರಿವ್ಯೂ ಹೋಯ್ತು.. ಎನ್ನುತ್ತಿದ್ದಂತೆ ಎಲ್ಲರು ನಕ್ಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
https://twitter.com/xxxAarav/status/1493955357290659843?ref_src=twsrc%5Etfw%7Ctwcamp%5Etweetembed%7Ctwterm%5E1493955357290659843%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fsports%2Frohit-sharma-again-ask-virat-kohli-advice-drs-call-umpire-given-wide-1435183
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.
ನಂತರ ಟೀಂ ಇಂಡಿಯಾ 18.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರೋಹಿತ್ ಶರ್ಮಾ 40 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು









