Rohit Sharma | ಹಿಟ್ ಮ್ಯಾನ್ ಮುಟ್ಟಿದ್ದೆಲ್ಲಾ ಚಿನ್ನ.. Rohit-sharma-becoming-king-drs-reviews
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಡಿದುಕೊಳ್ಳುವುದೆಲ್ಲವೂ ಚಿನ್ನವಾಗುತ್ತಿದೆ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳು. ಆ ಚಿನ್ನ ಯಾವುದು ಎಂದೆಂದರೇ. DRS…!!
ಹೌದು ರೋಹಿತ್ ಶರ್ಮಾ ರಿವ್ಯೂಗೆ ಕಿಂಗ್ ಆಗುತ್ತಿದ್ದಾರೆ. ನಮ್ಮ ಟೀಂ ಇಂಡಿಯಾ ನಾಯಕರಿಗೆ ಡಿಆರ್ ಎಸ್ ಅಷ್ಟಾಗಿ ಆಗಿಬರಲಿಲ್ಲ.
DRS ಪರಿಚಯಿಸಿದ ದಿನದಿಂದ ಧೋನಿ ಮತ್ತು ಕೊಹ್ಲಿಗೆ ಡಿಎಸ್ ಆರ್ ಕೈ ಕೊಡುತ್ತಲೇ ಇತ್ತು. ಅದರಲ್ಲೂ ಮುಖ್ಯವಾಗಿ ಕೊಹ್ಲಿ ವಿಚಾರದಲ್ಲಿ ಇದು ತುಂಬಾ ಆಗಿದೆ.
ಆದರೆ, ರೋಹಿತ್ ಶರ್ಮಾ ವಿಷಯದಲ್ಲಿ ಇದು ಸಂಪೂರ್ಣ ಉಲ್ಟಾಪಲ್ಟಾ ಆಗುತ್ತಿದೆ. ರೋಹಿತ್ ಕೇಳಿದ ರಿವ್ಯೂಗಳೆಲ್ಲವೂ ತಮ್ಮ ಪರವಾಗಿ ಬರುತ್ತಿವೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾಗಲೂ ಡಿಆರ್ ಎಸ್ ಅವರ ಅನುಕೂಲಕ್ಕೆ ತಕ್ಕಂತೆ ಬರುತ್ತಿತ್ತು.
ಇತ್ತೀಚೆಗೆ ರೋಹಿತ್, ವಿಂಡೀಸ್ ವಿರುದ್ಧದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ ರಿವ್ಯೂ ನಿರ್ಧಾರಗಳ ಮೂಲಕ ಎಲ್ಲರನ್ನೂ ಆಕರ್ಷಿಸಿದರು.
ಮೊದಲ ಏಕದಿನ ಪಂದ್ಯದಲ್ಲಿ, ಬ್ರೂಕ್ಸ್ ವಿಷಯವಾಗಿ ಕೊಹ್ಲಿ ಸಲಹೆಯೊಂದಿಗೆ ರೋಹಿತ್ ಡಿಆರ್ಎಸ್ ತೆಗೆದುಕೊಂಡರು. ಫಲಿತಾಂಶವು ಧನಾತ್ಮಕವಾಗಿತ್ತು.
ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ರೋಹಿತ್ ಡ್ಯಾರೆನ್ ಬ್ರಾವೋ ಔಟ್ ಬಗ್ಗೆ ಡಿಆರ್ ಎಸ್ ತೆಗೆದುಕೊಂಡರು.
ಪಂತ್ ಮೇಲಿನ ವಿಶ್ವಾಸದಿಂದ ರಿವ್ಯೂಗೆ ಹೋಗಿ ಸಕ್ಸಸ್ ಆದ ರೋಹಿತ್ ಅವರನ್ನು ರಿವ್ಯೂಸ್ ಕಿಂಗ್ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಮೇಲೆ ಅಭಿಮಾನಿಗಳು ಮಾಡುತ್ತಿರುವ ಮೀಮ್ ಗಳು ವೈರಲ್ ಆಗುತ್ತಿವೆ.









