ವಿರಾಟ್ ದಾಖಲೆ ಮುರಿದ ರೋ`ಹಿಟ್’
ಕೋಲ್ಕತ್ತಾ : ಟೀಂ ಇಂಡಿಯಾದ ಟಿ20 ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಚಿಂದಿ ಉಡಾಯಿಸಿದ್ದಾರೆ.
ನಿನ್ನೆ ಕೊಲ್ಕತ್ತಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದರು.
ನಿನ್ನೆಯ ಪಂದ್ಯದಲ್ಲಿ ರೋಹಿತ್ ಕೇವಲ 31 ಎಸೆತಗಳಲ್ಲಿ 56 ರನ್ ಚಚ್ಚಿದ್ರು. ಈ ಮೂಲಕ ಟಿ-20ಯಲ್ಲಿ ಅತಿ ಹೆಚ್ಚು 50 ಪ್ಲಸ್ ಮೊತ್ತ ಬಾರಿಸಿದ ಶ್ರೇಯಕ್ಕೆ ರೋಹಿತ್ ಪಾತ್ರರಾದರು.
ಅಂದಹಾಗೆ ನಿನ್ನೆ ರೋಹಿತ್ ಬ್ಯಾಟ್ ನಿಂದ ಸಿಡಿದ ಅರ್ಧಶತಕ ಟಿ 20 ಕ್ರಿಕೆಟ್ ನಲ್ಲಿ ಅವರ 30ನೇ ಅರ್ಧಶತಕವಾಗಿತ್ತು.
ಈ ಮೂಲಕ ಚುಟುಕು ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಿಂದೆ ಹಾಕಿದರು.
ವಿರಾಟ್ ಕೊಹ್ಲಿ 95 ಪಂದ್ಯಗಳಿಂದ 52.04 ಸರಾಸರಿಯಲ್ಲಿ 29 ಅರ್ಧಶತಕಗಳೊಂದಿಗೆ 3,227 ರನ್ ಪೇರಿಸಿದ್ದಾರೆ. ರೋಹಿತ್ ಶರ್ಮಾ ಮೂವತ್ತು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಟಿ 20 ಸರಣಿಯಿಂದ ವಿಶ್ರಾಂತಿ ಪಡೆದಿರುವ ವಿರಾಟ್, ಕಿವೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಮೂರು ಮ್ಯಾಚ್ ಗಳ ಟಿ20 ಸರಣಿಯನ್ನು ರೋಹಿತ್ ಶರ್ಮಾ ನಾಯಕ್ವದಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ.
ಅಲ್ಲದೆ ರೋಹಿತ್ ನಿನ್ನೆ, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ 150 ಸಿಕ್ಸರ್ ಬಾರಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಹಿಟ್ಮ್ಯಾನ್ ಪ್ರಸ್ತುತ 119 ಪಂದ್ಯಗಳಿಂದ 150 ಸಿಕ್ಸರ್ ಸಿಡಿಸಿದ್ದು, ನ್ಯೂಜಿಲ್ಯಾಂಡ್ ನ ಗಪ್ಟಿಲ್ 112 ಪಂದ್ಯಗಳಿಂದ 161 ಸಿಕ್ಸರ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.