Rohit sharma | ಪಂದ್ಯ ಗೆದ್ದರೂ ನಿರಾಸೆಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ..!!
ಶ್ರೀಲಂಕಾ ವಿರುದ್ಧ ಮೊದಲ ಟಿ 20 ಪಂದ್ಯ ಗೆದ್ದರೂ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಫೀಲ್ಡಿಂಗ್ ವಿಚಾರದಲ್ಲಿ ತುಂಬಾ ನಿರಾಸೆಗೊಂಡಿದ್ದಾರೆ.
ಹೌದು..! ಲಕ್ನೋದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 62 ರನ್ ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಇಶಾನ್ 89 ರನ್ ಗಳಿಸಿದ್ರೆ, ರೋಹಿತ್ ಶರ್ಮಾ 44 ರನ್, ಶ್ರೇಯಸ್ ಅಯ್ಯರ್ ಔಟ್ ಆಗದೇ 57 ರನ್ ಗಳಿಸಿದರು.
ಇದರೊಂದಿಗೆ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ, 20 ಓವರ್ ಗಳಲ್ಲಿ 137 ರನ್ ಗಳಿಸಲು ಮಾತ್ರ ಶಕ್ತವಾಯಿತು. ಇದರೊಂದಿಗೆ ಭಾರತ ತಂಡ 62 ರನ್ ಗಳಿಸಿತು.
ಪಂದ್ಯದ ನಂತರ ರೋಹಿತ್ ಶರ್ಮಾ ಮಾತನಾಡಿದ್ದು, ”ಶ್ರೀಲಂಕಾ ವಿರುದ್ಧದ ಟಿ20 ಪಂದ್ಯವನ್ನು ಗೆದ್ದಿರುವುದಕ್ಕೆ ನನಗೆ ಸಂತೋಷವಾಗಿದೆ.
ಆದರೆ ಒಂದು ವಿಷಯ ನನ್ನನ್ನು ಕಾಡುತ್ತಿದೆ. ನಮ್ಮ ಫೀಲ್ಡಿಂಗ್ ಗುಣಮಟ್ಟದಿಂದ ಕೂಡಿಲ್ಲ. ಪಂದ್ಯದಲ್ಲಿ ಕೆಲವು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇವೆ.
ಮುಂಬರುವ ಪಂದ್ಯಗಳಲ್ಲಿ ಫೀಲ್ಡಿಂಗ್ ಮೇಲೆ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ, ನಾವು ಅಭ್ಯಾಸದ ಅವಧಿಯಲ್ಲಿ ಫೀಲ್ಡಿಂಗ್ ಕೋಚ್‌ನೊಂದಿಗೆ ಸಮಾಲೋಚಿಸುತ್ತೇವೆ ಮತ್ತು ತಂತ್ರಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತೇವೆ.
2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ವರೆಗೆ ನಾವು ಮೈದಾನದಲ್ಲಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಬೇಕಾಗಿದೆ ಎಂದು ಹೇಳಿದರು.
”ಇಶಾನ್ ಕಿಶನ್ ಫಾರ್ಮ್‌ನಲ್ಲಿರುವುದು ಸಂತಸ ತಂದಿದೆ. ನನಗೆ ಇಶಾನ್ ಬಹಳ ದಿನಗಳಿಂದ ಗೊತ್ತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾವಿಬ್ಬರೂ ಇನ್ನಿಂಗ್ಸ್ ಆರಂಭಿಸುತ್ತೇವೆ.
ಪವರ್‌ಪ್ಲೇನಲ್ಲಿ ಅವರು ಎಷ್ಟು ಮೌಲ್ಯಯುತ ಆಟಗಾರರಾಗಿದ್ದಾರೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ ಎಂದಿದ್ದಾರೆ. Rohit-sharma-disappointed-fielding-failure









