30 ನೇ ಶತಕ ಸಿಡಿಸಿ ರಿಕಿ ಪಾಟಿಂಗ್ ದಾಖಲೆ ಸರಿಗಟ್ಟಿದ ಹಿಟ್ ಮ್ಯಾನ್ ಶರ್ಮಾ…
ಮಂಗಳವಾರ ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ತನ್ನ ಫಾರ್ಮ್ ಗೆ ಮರಳಿ ಬಂದಿದ್ದಾರೆ. ಈ ಹಿಂದೆ ಇದೇ ಮೈದಾನದಲ್ಲಿ ಟಿ20ಯಲ್ಲಿ ಶತಕ ಸಿಡಿಸಿದ್ದ ರೋಹಿತ್ ಮತ್ತೊಮ್ಮೆ ಅದೇ ಮೈದಾನದಲ್ಲಿ ಏಕದಿನ ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದು ODI ನಲ್ಲಿ ರೋಹಿತ್ ಅವರ 30 ನೇ ಶತಕ. ಹಿಟ್ ಮ್ಯಾನ್ 85 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 101 ರನ್ ಚಚ್ಚಿದ್ದರು. ಈ ಮೂಲಕ 50 ಓವರ್‌ಗಳ ಸ್ವರೂಪದಲ್ಲಿ ಅತಿ ಹೆಚ್ಚು ಶತಕ ಸಿಡಿಸಿ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನ ರಿಕಿ ಪಾಟಿಂಗ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ನಿವೃತ್ತರಾಗುವ ವೇಳೆಗೆ ಪಾಟಿಂಗ್ 30 ಶತಕಗಳನ್ನ ಸಿಡಿಸಿದ್ದರು. ರೋಹಿತ್ ಇನ್ನೊಂದು ಶತಕವನ್ನ ಗಳಸಿದರೆ ಪಾಟಿಂಗ್ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದ್ದಾರೆ.
ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ 49 ಶತಕಗಳೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ನಂತರ ವಿರಾಟ್ ಕೊಹ್ಲಿ ನಿಂತಿದ್ದಾರೆ. ಇವರಿಬ್ಬರ ನಂತರ ರೋಹಿತ್ ಶರ್ಮಾ ಮತ್ತು ಪಾಂಟಿಂಗ್ 3ನೇ ಸ್ಥಾನದಲ್ಲಿದ್ದಾರೆ.
ಮೂರು ವರ್ಷಗಳ ನಂತರ ರೋಹಿತ್ ಅವರ ಮೊದಲ ಏಕದಿನ ಶತಕ ಇದಾಗಿದೆ. ಇದಕ್ಕೂ ಮೊದಲು, ಜನವರಿ 19, 2020 ರಂದು ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶತಕ ಗಳಿಸಿದ್ದರು. ಈ ಶತಕದೊಂದಿಗೆ ರೋಹಿತ್ ಶ್ರೀಲಂಕಾದ ಮಾಜಿ ಆರಂಭಿಕ ಆಟಗಾರ ಸನತ್ ಜಯಸೂರ್ಯ ಅವರ ದಾಖಲೆಯನ್ನ ಹಿಂದಿಕ್ಕಿದ್ದರು. ಜಯಸೂರ್ಯ ಆರಂಭಿಕರಾಗಿ 28 ODI ಶತಕಗಳನ್ನು ಗಳಿಸಿದರೆ, ರೋಹಿತ್ ಶರ್ಮಾ ಆ ಶತಕದೊಂದಿಗೆ ತಮ್ಮ 29 ನೇ ODI ಶತಕವನ್ನು ದಾಖಲಿಸಿದರು.
Rohit Sharma equals Ricky Potting’s record








