Rohit sharma | ಇಂಥಹ ಅದ್ಭುತ ಬೌಲಿಂಗ್ ಸ್ಪೆಲ್ ನೋಡಿಯೇ ಇಲ್ಲ Rohit-sharma-hails-prasidh-krishna saaksha tv
ಅಹಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 44 ರನ್ ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸಿದ್ಧ್ ಕೃಷ್ಣ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. “ಈ ಸರಣಿಯನ್ನು ಗೆದ್ದಿರುವುದು ನಮಗೆ ಉತ್ತಮ ಅನುಭವ ನೀಡಿದೆ.
ಈ ಪಂದ್ಯದಲ್ಲಿ ನಾವು ಕೆಲವು ಸವಾಲುಗಳನ್ನು ಎದುರಿಸಿದ್ದೇವೆ. ರಾಹುಲ್ ಮತ್ತು ಸೂರ್ಯ ಕುಮಾರ್ ಯಾದವ್ ಉತ್ತಮ ಜೊತೆಯಾಟವಾಡಿದರು.
ಇದರ ಪರಿಣಾಮವಾಗಿ ಅಂತಿಮವಾಗಿ ನಾವು ಗೌರವಾನ್ವಿತ ಮೊತ್ತವನ್ನು ಗಳಿಸಿದ್ವಿ. ನಾವು ಆ ಸ್ಕೋರ್ ಅನ್ನು ಡಿಫೆಂಡ್ ಮಾಡಿಕೊಳ್ಳಬಹುದು ನಾವು ಭಾವಿಸಿದ್ದೇವು.
ನಮ್ಮ ಬೌಲರ್‌ಗಳು ಅದನ್ನೇ ಮಾಡಿದ್ದಾರೆ. ಈ ಪಂದ್ಯದಲ್ಲಿ ಬೌಲರ್‌ಗಳು ಅದ್ಭುತವಾಗಿ ಮಿಂಚಿದರು.
ವಿಶೇಷವಾಗಿ ಪ್ರಸಿದ್ಧ ಕೃಷ್ಣ ವಿಂಡೀಸ್ ಬ್ಯಾಟರ್‌ಗಳನ್ನು ಅದ್ಭುತ ವೇಗದಿಂದ ಬೆದರಿಸಿದರು.
ಇದುವರೆಗೂ ಭಾರತದ ಪಿಚ್‌ಗಳಲ್ಲಿ ಇಂತಹ ಸ್ಪೆಲ್ ಅನ್ನು ನಾನು ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೂರ್ಯ ಕುಮಾರ್ ಯಾದವ್ ಬಗ್ಗೆ ಮಾತನಾಡಿ.. ಸೂರ್ಯ ಇನ್ನೂ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿರಬೇಕಿತ್ತು. ಅವರು ತಂಡ ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.









