Rohitsharma | ನಾಯಕನಾಗಿ ಚರಿತ್ರೆ ಸೃಷ್ಠಿಸಲಿದ್ದಾರೆ ಹಿಟ್ ಮ್ಯಾನ್ rohit-sharma-place-captains-elite-list
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಒಂದು ಪಂದ್ಯ ಬಾಕಿ ಇರುವಂತೆಯೇ ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಭಾರತ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಕ್ಲೀನ್ ಸ್ವೀಪ್ ಮಾಡಿದರೆ ಹಲವು ದಾಖಲೆಗಳು ಸೃಷ್ಟಿಯಾಗಲಿವೆ. ಅಲ್ಲದೇ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕರಾಗಿ ಇತಿಹಾಸ ನಿರ್ಮಿಸಲಿದ್ದಾರೆ.
2014ರಲ್ಲಿ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.
ಟೀಮ್ ಇಂಡಿಯಾ ವಿಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ರೋಹಿತ್ ಶರ್ಮಾ ತವರಿನಲ್ಲಿ ತಂಡವೊಂದನ್ನು ವೈಟ್ ವಾಶ್ ಮಾಡಿದ ಎಂಟನೇ ನಾಯಕನಾಗಲಿದ್ದಾರೆ. ಕಪಿಲ್ ದೇವ್, ದಿಲೀಪ್ ವೆಂಗ್ ಸರ್ಕಾರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಈವರೆಗೂ ವೈಟ್ ವಾಶ್ ಮಾಡಿಲ್ಲ. ಈ ಬಾರಿ ಮಾತ್ರ ಅದನ್ನು ಬ್ರೇಕ್ ಮಾಡುವ ಅವಕಾಶವಿದೆ.
ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಗೆದ್ದರೆ, ತವರಿನಲ್ಲಿ ಟೀಂ ಇಂಡಿಯಾಗೆ 12ನೇ ವೈಟ್ ವಾಶ್ ಸರಣಿ ಜಯವಾಗಲಿದೆ.
ಟೀಂ ಇಂಡಿಯಾ ನೆಲದಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್, ಜಿಂಬಾಬ್ವೆ ಮತ್ತು ಇಂಗ್ಲೆಂಡ್ ವೈಟ್ ವಾಶ್ ಆಗಿತ್ತು. ಮೂರನೇ ಏಕದಿನ ಪಂದ್ಯದಲ್ಲಿ ಸೋತರೇ ವೆಸ್ಟ್ ಇಂಡೀಸ್ ವೈಟ್ ವಾಶ್ ಪಟ್ಟಿ ಸೇರಲಿದೆ.
ವೆಸ್ಟ್ ಇಂಡೀಸ್ ಇದುವರೆಗೆ 19 ಏಕದಿನ ಸರಣಿಗಳಲ್ಲಿ ವೈಟ್ ವಾಶ್ ಆಗಿದೆ. ಟೀಂ ಇಂಡಿಯಾ ಕೈಯಲ್ಲಿ ವೈಟ್ ವಾಶ್ ಆದ್ರೆ ಆ ಸಂಖ್ಯೆ 20ಕ್ಕೆ ತಲುಪಲಿದೆ.









