Rohit sharma | ಸಂಜು ಸ್ಯಾಮ್ಸನ್ ಅಪ್ರತಿಮ ಪ್ರತಿಭಾವಂತ ಆಟಗಾರ
”ಸಂಜು ಸ್ಯಾಮ್ಸನ್ ಅಪ್ರತಿಮ ಪ್ರತಿಭೆ ಹೊಂದಿದ್ದಾರೆ. ಅವರ ಬ್ಯಾಟಿಂಗ್ ನೋಡಿದಾಗಲೆಲ್ಲ ಸಂತಸವಾಗುತ್ತದೆ ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದಾರೆ.
ಸದ್ಯ ಗಾಯದ ಸಮಸ್ಯೆಯಿಂದಾಗಿ ಸೂರ್ಯ ಕುಮಾರ್ ಯಾದವ್ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಆಡುವ ಅವಕಾಶಗಳು ಹೆಚ್ಚಿವೆ.
ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ, ”ಸಂಜು ಸ್ಯಾಮ್ಸನ್ ಅಪ್ರತಿಮ ಪ್ರತಿಭೆ ಹೊಂದಿದ್ದಾರೆ.
ಅವರ ಬ್ಯಾಟಿಂಗ್ ನೋಡಿದಾಗಲೆಲ್ಲ ಸಂತಸವಾಗುತ್ತದೆ. ಅವರನ್ನು ಪಂದ್ಯಕ್ಕೆ ಕರೆತರುವುದು ಅತೀ ಅಗತ್ಯ. ಭಾರತದಲ್ಲಿ ಅನೇಕ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ..
ಸಂಜು ಬ್ಯಾಕ್ ಫುಟ್ ಗೇಮ್ ಅದ್ಭುತವಾಗಿರುತ್ತದೆ. ಅವರಲ್ಲಿ ಎಲ್ಲಾ ರೀತಿಯ ಹೊಡೆತಗಳನ್ನು ಆಡುವ ಸಾಮರ್ಥ್ಯವಿದೆ. ಸ್ಯಾಮ್ಸನ್ ಬಾರಿಸುವ ಹೊಡೆತಗಳು ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಆಡಲು ತುಂಬಾ ಕಷ್ಟ.
ಸ್ಯಾಮ್ಸನ್ ರಂತಃ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯದ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ನಾವು ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ.
ಸ್ಯಾಮ್ಸನ್ಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ. ಸ್ಯಾಮ್ಸನ್ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದು, ತಂಡ ಅವರ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ ಎಂದಿದ್ದಾರೆ.
ಭಾರತದ ಪರ 10 ಟಿ20 ಪಂದ್ಯಗಳನ್ನಾಡಿರುವ ಸ್ಯಾಮ್ಸನ್ ಕೇವಲ 117 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ ಕೇವಲ 11.70 ಆಗಿದೆ.









