Rohit sharma | ವಿಶ್ವ ದಾಖಲೆ ನಿರ್ಮಿಸಲು ರೋಹಿತ್ ಗೆ ಬೇಕು 36 ರನ್..
ತವರಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಮತ್ತೊಂದು ಮಹತ್ವದ ಕದನಕ್ಕೆ ಸಿದ್ಧವಾಗಿದೆ.
ಶ್ರೀಲಂಕಾ-ಭಾರತ ಟಿ20 ಸರಣಿಯು ಫೆಬ್ರವರಿ 24 ರಂದು ಲಕ್ನೋದಲ್ಲಿ ಆರಂಭವಾಗಲಿದೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.
ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ 36 ರನ್ ಗಳಿಸಿದರೆ ರೋಹಿತ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.
ಸದ್ಯ ರೋಹಿತ್ ಶರ್ಮಾ 3,263 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ 3299 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ 3,296 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತ-ಶ್ರೀಲಂಕಾ ಮೊದಲ ಟಿ20 ವಿಚಾರಕ್ಕೆ ಬಂದರೆ.. ಭಾರತ ಸ್ಟಾರ್ ಆಟಗಾರರಿಲ್ಲದೆ ಕಣಕ್ಕೆ ಇಳಿಯುತ್ತಿದೆ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ರಾಹುಲ್ ಮತ್ತು ವಾಷಿಂಗ್ಟನ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ತಂಡಕ್ಕೆ ಮರಳಲಿದ್ದಾರೆ.
ಉಭಯ ತಂಡಗಳು ಇದುವರೆಗೆ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 14 ಮತ್ತು ಶ್ರೀಲಂಕಾ 7 ಗೆಲುವು ಸಾಧಿಸಿವೆ.
ಆದರೆ ತವರಿನಲ್ಲಿ ಭಾರತ ಶ್ರೀಲಂಕಾದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಭಾರತ ಇದುವರೆಗೆ ತವರಿನ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಶ್ರೀಲಂಕಾ ಕೇವಲ ಎರಡರಲ್ಲಿ ಗೆದ್ದಿದೆ.
rohit-sharma-ready-become-top-run-scorer in t 20 I









