ರೋಹಿತ್ ನಡೆದಿದ್ದೇ ದಾರಿ.. ಮಾಡಿದ್ದೇ ದಾಖಲೆ..!
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಭಾರತ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ ರೋಹಿತ್ ತಂಡವನ್ನು ಯಶಸ್ಸಿನತ್ತ ಮುನ್ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ನಡೆದ ಚೊಚ್ಚಲ ಟಿ20ಯಲ್ಲಿ ರೋಹಿತ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧದ T20I ನಲ್ಲಿ ಭಾರತ ಘನ ಜಯ ಸಾಧಿಸುತ್ತಿದ್ದಂತೆ ರೋಹಿತ್ ಹೆಸರಿಗೆ ಅಪರೂಪದ ದಾಖಲೆ ಸೇರಿಕೊಂಡಿತು.
ಟಿ 20ಯಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಇದು ಸತತ ಹತ್ತನೇ ಜಯವಾಗಿದೆ.
ಭಾರತ ಈ ಸಾಧನೆ ಮಾಡಿರುವುದು ಇದೇ ಮೊದಲು. ಈ ಹಿಂದೆ 2020ರಲ್ಲಿ ಟೀಂ ಇಂಡಿಯಾ ಸತತ 9 ಪಂದ್ಯಗಳನ್ನು ಗೆದ್ದಿತ್ತು.
T20 ಮಾದರಿಯಲ್ಲಿ ರೋಹಿತ್ ಎರಡನೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ.
ಮೊದಲ ಸ್ಥಾನದಲ್ಲಿ ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘಾನ್ 12 ಗೆಲುವು ಸಾಧಿಸಿದ್ದಾರೆ.
ಆದರೆ, ಶ್ರೀಲಂಕಾ ಸರಣಿಯಲ್ಲಿ ರೋಹಿತ್ ಅಫ್ಘಾನ್ ದಾಖಲೆ ಸರಿಗಟ್ಟುವ ಸಾಧ್ಯತೆ ಇದೆ. rohit-sharma-records t 20 i cricket









