Rohit Sharma : ಬಾಂಗ್ಲಾ ನೆಲದಲ್ಲಿ ಬೇಡದ ದಾಖಲೆ ಬರೆದ ರೋಹಿತ್ ಶರ್ಮಾ..!!
ಟೀಮ್ ಇಂಡಿಯಾ ಬಾಂಗ್ಲಾ ವಿರುದ್ದ ಎರಡನೆ ಏಕದಿನ ಪಂದ್ಯದಲ್ಲಿ 5 ರನ್ಗಳಿಂದ ವೀರೋಚಿತ ಸೋಲು ಕಂಡಿದೆ.
ಜೊತೆಗೆ ಸರಣಿಯನ್ನು ಕೈಚೆಲ್ಲಿಕೊಂಡಿದೆ. ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಹೋರಾಟ ವ್ಯರ್ಥವಾಯಿತು.
ಬಾಂಗ್ಲಾ ವಿರುದ್ಧದ ಸೋಲು ಭಾರತ ತಂಡಕ್ಕೆ ಭಾರೀ ಮುಖಭಂಗವಾಗಿದೆ.
ಬಾಂಗ್ಲಾ ವಿರುದ್ಧ ಸೋಲು ಮೂಲಕ ನಾಯಕ ರೋಹಿತ್ ಶರ್ಮಾ ಅನಗತ್ಯ ದಾಖಲೆ ಬರೆದರು. ಬಾಂಗ್ಲಾ ನೆಲದಲ್ಲಿ `ಧೋನಿ ನಂತರ ಏಕದಿನ ಸರಣಿ ಸೋತ ಭಾರತದ ಎರಡನೆ ನಾಯಕ ಎನಿಸಿದರು. ಈ ಹಿಂದೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಸುರೇಶ್ ರೈನಾ ಸರಣಿ ಗೆದ್ದು ಬಂದಿದ್ದರು. ಏಳು ವರ್ಷದ ಹಿಂದೆ ಅಂದ್ರೆ 2015ರಲ್ಲಿ ಧೋನಿ ನೇತೃತ್ವದ ಭಾರತ ತಂಡ 1-2 ಅಂತರದಿಂದ ಸರಣಿ ಸೋತಿತ್ತು.
2016ರ ನಂತರ ಬಾಂಗ್ಲಾ ತಂಡ ತನ್ನ ತವರಿನಲ್ಲಿ ಏಕದಿನ ಸರಣಿ ಸೋತಿಲ್ಲ