Rohit -Shikar | 5000 ರನ್ ಪೂರೈಸಿದ ರೋಹಿತ್ – ಧವನ್ ಜೋಡಿ
ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳ ಸುನಾಮಿ ಸೃಷ್ಠಿಸಿದೆ.
ಟೀಂ ಇಂಡಿಯಾದ ಬೌಲರ್ ಗಳಾದ ಜಸ್ ಪ್ರೀತ್ ಬುಮ್ರಾ, ಮೊಹ್ಮದ್ ಶಮಿ ಬೌಲಿಂಗ್ ನಲ್ಲಿ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಇನ್ನು ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ರನ್ ಗಳಿಸುವ ವಿಷಯದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆರು ರನ್ ಗಳಿಸುವ ಮೂಲಕ ಈ ಜೋಡಿ 5000 ರನ್ ಗಳನ್ನು ಜೊತೆಯಾಟದಲ್ಲಿ ಪೂರೈಸಿದೆ.

5000 ರನ್ ಗಳ ಗಡಿದಾಟಲು ಈ ಜೋಡಿ 114 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದೆ.
ಇದಕ್ಕೂ ಮುನ್ನಾ ಸಚಿನ್ – ಗಂಗೂಲಿ ಜೋಡಿ ಏಕದಿನ ಕ್ರಿಕೆಟ್ ನಲ್ಲಿ ಮೊದಲ ವಿಕೆಟ್ ಗೆ 5000 ರನ್ ಗಳನ್ನು ಪೇರಿಸಿತ್ತು.
ಏಕದಿನ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಸಚಿನ್ – ಗಂಗೂಲಿ ಜೋಡಿಯಾಗಿ 136 ಇನ್ನಿಂಗ್ಸ್ ಗಳಲ್ಲಿ 6609 ರನ್ ಗಳನ್ನ ಜೋಡಿಸಿದೆ.
ಇವರ ನಂತರದ ಸ್ಥಾನದಲ್ಲಿ ಆಸೀಸ್‌ನ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಜೋಡಿ ಮ್ಯಾಥ್ಯೂ ಹೇಡನ್-ಆಡಮ್ ಗಿಲ್‌ಕ್ರಿಸ್ಟ್ (114 ಇನ್ನಿಂಗ್ಸ್‌ಗಳಲ್ಲಿ 5472) ಮತ್ತು ವಿಂಡೀಸ್‌ನ ದಂತಕಥೆ ಆರಂಭಿಕ ಜೋಡಿ ಗೋರ್ಡನ್ ಗ್ರೀನಿಡ್ಜ್-ಡೆಸ್ಮಂಡ್ ಹೇನ್ಸ್ (102 ಇನ್ನಿಂಗ್ಸ್‌ಗಳಲ್ಲಿ 5150) ಇದ್ದಾರೆ.