Rohit Sharma – ವಿಶ್ವ ದಾಖಲೆಯನ್ನ ಪೀಸ್ ಮಾಡಿದ ರೋಹಿತ್ ಶರ್ಮಾ
ಟಿ 20 ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಆದ್ರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿಶ್ವದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ಹಿಟ್ ಮ್ಯಾನ್ ವೈಯಕ್ತಿಕವಾಗಿ ವರ್ಲ್ಡ್ ರೆಕಾರ್ಡ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಚುಟುಕು ಕ್ರಿಕೆಟ್ ವಿಶ್ವಕಪ್ ನಲ್ಲಿ 36ನೇ ಪಂದ್ಯವನ್ನಾಡಿದ ರೋಹಿತ್ ಶರ್ಮಾ ಮೆಗಾ ಈವೆಂಟ್ ನಲ್ಲಿಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರನಾಗಿ ಚರಿತ್ರೆ ಸೃಷ್ಟಿಸಿದ್ದಾರೆ.
ವಿಶ್ವಕಪ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದ ದಾಖಲೆ ಶ್ರೀಲಂಕಾ ಬ್ಯಾಟರ್ ತಿಲಕರತ್ನೆ ದಿಲ್ಷಾನ್ ಹೆಸರಿನಲ್ಲಿತ್ತು.
ತಿಲಕರತ್ನೆ ಟಿ 20 ವರ್ಲ್ಡ್ ಕಪ್ ನಲ್ಲಿ ಒಟ್ಟಾರೆ 35 ಮ್ಯಾಚ್ ಗಳನ್ನಾಡಿದ್ದಾರೆ. 2007ರಿಂದ ಸತತವಾಗಿ ಎಂಟು ವರ್ಲ್ಡ್ ಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಿದ್ದಾರೆ.
ಬಾಂಗ್ಲಾದೇಶದ ಕ್ಯಾಪ್ಟನ್ ಶಕಿಬ್ ಅಲ್ ಹಸನ್ ಕೂಡ ದಾಖಲೆ ಬರೆದಿದ್ದಾರೆ.
ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ, ದಿಲ್ಷನ್ ನಂತರದ ಸ್ಥಾನದಲ್ಲಿ ಶಕಿಬ್ ಅಲ್ ಹಸನ್ 34 ಪಂದ್ಯ, ಡ್ವೆನ್ ಬ್ರಾವೋ 34 ಪಂದ್ಯ, ಶಾಹಿದ್ ಅಫ್ರಿದಿ 34 ಪಂದ್ಯ, ಡೆವಿಡ್ ವಾರ್ನರ್ 32 ಪಂದ್ಯಗಳನ್ನಾಡಿದ್ದಾರೆ.