Rohit-sharma | ರೋಹಿತ್ ಶರ್ಮಾಗೆ ಕೊರೊನಾ ಸೋಂಕು
ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಭಾರೀ ಆಘಾತ ಎದುರಾಗಿದೆ.
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಪ್ರಸ್ತುತ ರೋಹಿತ್ ಶರ್ಮಾ ಹೋಟೆಲ್ ರೂಮ್ ನಲ್ಲಿ ಐಸೋಲೆಷನ್ ನಲ್ಲಿದ್ದಾರೆ.
ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಬಿಸಿಸಿಐ ತಿಳಿಸಿದೆ.
ಶನಿವಾರ ನಡೆದ ರ್ಯಾಪಿಡ್ ಯಾಂಟಿಜನ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಪಾಸಿಟಿವ್ ಬಂದಿದೆ.
ಆತ ಪ್ರಸ್ತುತ ಐಲೋಲೇಷನ್ ನಲ್ಲಿದ್ದಾರೆ. ಅದೇ ರೀತಿ ಅವರು ಪ್ರಸ್ತುತ ಪ್ರತ್ಯೇಕವಾಗಿ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಬಿಸಿಸಿಐ ಟ್ವಿಟರ್‌ನಲ್ಲಿ ತಿಳಿಸಿದೆ.
ಇನ್ನು ಪ್ರಸ್ತುತ ಟೀಂ ಇಂಡಿಯಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇದರ ಭಾಗವಾಗಿ ಲಿಸೆಸ್ಟರ್ ಶೈರ್ ತಂಡ ವಿರುದ್ಧ ಟೀಂ ಇಂಡಿಯಾ ಪ್ರಾಕ್ಟೀಸ್ ಮ್ಯಾಚ್ ಆಡುತ್ತಿದೆ.
ಈ ಪಂದ್ಯದ ಅಂತಿಮ ದಿನದ ಆಟದಿಂದ ರೋಹಿತ್ ಶರ್ಮಾ ದೂರವಿದ್ದರು. ರೋಹಿತ್ ಶರ್ಮಾ ಒಂದು ವಾರದ ಕಾಲ ಐಸೋಲೆಷನ್ ನಲ್ಲಿ ಇರಲಿದ್ದಾರೆ.
ಹೀಗಾಗಿ ಜುಲೈ ಒಂದರಂದು ನಡೆಯಲಿರುವ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ದೂರವಾಗುವ ಸಾಧ್ಯತೆಗಳಿವೆ.