Rohit Sharma | ರೋಹಿತ್ ಕೆಟ್ಟ ದಾಖಲೆ.. ಟೀಂ ಇಂಡಿಯಾದ ಮೊದಲ ಬ್ಯಾಟರ್
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ 20 ಕ್ರಿಕೆಟ್ ನಲ್ಲಿ ಎಷ್ಟು ಅಪಾಯಕಾರಿ ಬ್ಯಾಟರ್ ಎಂಬುವುದನ್ನ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ವಿಧ್ವಂಸಕ ಆಟದ ಮೂಲಕ ಹಿಟ್ ಮ್ಯಾನ್ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ.
ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ 20 ಪಂದ್ಯದಲ್ಲಿ ಡಕೌಟ್ ಆಗುವ ಮೂಲಕ ರೋಹಿತ್ ಶರ್ಮಾ ಒಂದು ಕೆಟ್ಟ ದಾಖಲೆ ನಮೂದಿಸಿದ್ದಾರೆ.

ಈ ಪಂದ್ಯದಲ್ಲಿ ಓಪನರ್ ಆಗಿ ಬಂದ ರೋಹಿತ್ ಶರ್ಮಾ ಕಗಿಸೋ ರಬಾಡ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಇದರೊಂದಿಗೆ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ಬಾರಿ ಡಕೌಟ್ ಆದ ಭಾರತೀಯ ಬ್ಯಾಟರ್ ಆಗಿದ್ದಾರೆ.
ಹಿಟ್ ಮ್ಯಾನ್ ಇಲ್ಲಿಯವರೆಗೂ 9 ಬಾರಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಇದ್ದಾರೆ.
ಅವರು ಐದು ಬಾರಿ ಡಕೌಟ್ ಆಗಿದ್ದಾರೆ. ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದು, ನಾಲ್ಕು ಬಾರಿ ಡಕೌಟ್ ಆಗಿದ್ದಾರೆ.









