ಐಪಿಎಲ್ ನಲ್ಲಿ ಚರಿತ್ರೆ ಸೃಷ್ಟಿಸಿದ ಹಿಟ್ ಮ್ಯಾನ್ ರೋಹಿತ್..
ದುಬೈ : ಮೆಗ್ನಿಪಿಸೆಂಟ್ ಮಂಗಳವಾರ ಮಿಲಿಯನ್ ಟೂರ್ನಿಯ ಮೆಗಾ ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಆ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದು ಚರಿತ್ರೆ ಸೃಷ್ಟಿಸಿದೆ.
ದುಬೈ ವೇದಿಕೆಯಾಗಿ ಮಂಗಳವಾರ ನಡೆದ ಐಪಿಎಲ್ ಫೈನಲ್ ನಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಯಂಗ್ ಗನ್ಸ್ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇತ್ತ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಗಳು ಡೆಲ್ಲಿ ಹುಡುಗರ ಮೇಲೆ ದಂಡಯಾತ್ರೆ ನಡೆಸಿದ್ರು.
ಪರಿಣಾಮ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಡೆಲ್ಲಿ ನಾಯಕ ಐಯ್ಯರ್, ಪಂತ್ ಉತ್ತಮ ಬ್ಯಾಟಿಂಗ್ ನೆರವಿನಿಂದ 156 ರನ್ ಗಳನ್ನು ಗಳಿಸಿತ್ತು.
ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾರ ಸ್ಫೋಟಕ ಬ್ಯಾಟಿಂಗ್ ನಿಂದ ಇನ್ನೂ 8 ಎಸೆತಗರು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿ ಟ್ರೋಫಿಯನ್ನು ಗೆದ್ದುಕೊಂಡಿತು.
ಚರಿತ್ರೆ ಸೃಷ್ಠಿಸಿದ ಮುಂಬೈ ಇಂಡಿಯನ್ಸ್
ಟೂರ್ನಿ ಆರಂಭದಿಂದಲೂ ಅತ್ಯದ್ಭುತ ಆಟವಾಡಿಕೊಂಡು ಬಂದ ಮುಂಬೈ ಇಂಡಿಯನ್ಸ್ ಫೈನಲ್ ನಲ್ಲಿ ಯಾವುದೇ ಕ್ಷಣದಲ್ಲೂ ಹಿನ್ನಡೆ ಅನುಭವಿಸಲಿಲ್ಲ.
ಪ್ರತಿ ಹಂತದಲ್ಲೂ ಚಾಂಪಿಯನ್ ಆಟವಾಡಿದ ಮುಂಬೈ ಡೆಲ್ಲಿ ಹುಡುಗರಿಗೆ ಸೋಲುಣಿಸಿತು. ಅಲ್ಲದೆ ಐಪಿಎಲ್ ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆಯಿತು.
ಈ ಹಿಂದೆ ಮುಂಬೈ ತಂಡ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ.
ನಾಯಕನಾಗಿ ರೋಹಿತ್ ಸಕ್ಸಸ್
ಮುಂಬೈ ಇಂಡಿಯನ್ಸ್ ಈ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಚರಿತ್ರೆ ಸೃಷ್ಟಿಸಿದೆ. ಜೊತೆಗೆ ನಾಯಕನಾಗಿ ರೋಹಿತ್ ಅವರು ಕೂಡ ಐದು ಬಾರೀ ಐಪಿಎಲ್ ಟ್ರೋಫಿ ಗೆದ್ದ ಕ್ಯಾಪ್ಟನ್ ಎಂಬ ಖ್ಯಾತಿ ಪಡೆದಿದ್ದಾರೆ.
ಹೌದು..! ರೋಹಿತ್ ಶರ್ಮಾ ಮುಂಬೈ ತಂಡದ ನಾಯಕರಾಗಿ ಐದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ರೋಹಿತ್ ಶರ್ಮಾ ಮೋಸ್ಟ್ ಸಕ್ಸಸ್ ಫುಲ್ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇದು ಒಂದು ಕಡೆಯಾದ್ರೆ ರೋಹಿತ್ ಶರ್ಮಾ ಅವರು ನಿನ್ನೆ ತಮ್ಮ 200ನೇ ಐಪಿಎಲ್ ಪಂದ್ಯವಾಡಿದ್ರು. ನಿನ್ನೆಯ ಫೈನಲ್ ಪಂದ್ಯದಲ್ಲಿ ಅವರು 68 ರನ್ ಸಿಡಿಸಿದ್ರು. ವಿಶೇಷವೆನಂದ್ರೆ ರೋಹಿತ್ ತಮ್ಮ ಐಪಿಎಲ್ ನ 50ನೇ, 100ನೇ 150ನೇ ಪಂದ್ಯದಲ್ಲೂ ಅರ್ಧಶತಕ ಬಾರಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel