ಟೀಮ್ ಇಂಡಿಯಾದ ನಾಯಕತ್ವವನ್ನು ಹಂಚಬೇಕು ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ವಿರಾಟ್ ಕೊಹ್ಲಿ, ಭಾರತ ತಂಡವನ್ನು ಮೂರು ವಿಭಾಗಗಳಲ್ಲಿ ಮುನ್ನಡೆಸುತ್ತಿದ್ದಾರೆ. ಮಾಜಿ ವೇಗಿ ಅತುಲ್ ವಸನ್ ಈ ಬಗ್ಗೆ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ಮುಂಬೈಕರ್ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯ ತಿಳಿದ್ದಾರೆ.
ವಿರಾಟ್ ಕೊಹ್ಲಿ ಗಾಯದಿಂದ ಹೊರಗುಳಿದ ಸರಣಿಯನ್ನು ರೋಹಿತ್ ಶರ್ಮಾ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿರುವ ರೋಹಿತ್ ತಂಡಕ್ಕೆ ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ತೊಡೆಸಿದ್ದಾರೆ.
ಸಂದರ್ಶನ ಒಂದರಲ್ಲಿ ಅವರು ಅತುಲ್, “ನಾಯಕತ್ವ ವಿಭಜಿಸುವುದು ಅವಶ್ಯಕ. ವಿರಾಟ್ ಕೊಹ್ಲಿ ಮೂರು ವಿಭಾಗಗಳಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ, ರೋಹಿತ್ ಶರ್ಮಾರನ್ನು ನಾಯಕತ್ವದ ಗುಣಗಳಿವೆ” ಎಂದು ತಿಳಿಸಿದ್ದಾರೆ.
“ಐಪಿಎಲ್ ನಲ್ಲಿ ಅವರ ನಾಯಕತ್ಚ ಚೆನ್ನಾಗಿದೆ. ಭಾರತದ ಪತವೂ ಈ ಸಾಧನೆ ಮಾಡಬಹುದು” ಎಂದಿದ್ದಾರೆ.
“ಟೆಸ್ಟ್ ಹಾಗೂ ಏಕದಿನ ಗಳಲ್ಲಿ ವಿರಾಟ್ ತಂಡವನ್ನು ಮುನ್ನಡೆಸಬೇಕು. ರೋಹಿತ್ ಅವರಿಗೆ ಚುಟುಕು ಪಂದ್ಯದ ಹೊಣೆ ನೀಡಬೇಕು ಇದರಿಂದ, ವಿರಾಟ್ ಹೊರೆ ಸಹ ಕಡಿಮೆ ಆಗುತ್ತದೆ” ಎಂದು ಹೇಳಿದ್ದಾರೆ.








