Rohith Sharma : ಹೆಬ್ಬೆಟ್ಟು ಗಾಯದ ನಡುವೆಯೂ ಎಂಟೆದೆಯ ಆಟ…
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿನ್ನೆ ( ಡಿಸೆಂಬರ್ 7) ಆತಿಥೇಯ ಬಾಂಗ್ಲಾದೇಶದ ವಿರುದ್ಧದ 2 ನೇ ಪಂದ್ಯದ ವೇಳೆ ಗಾಯಗೊಂಡಿದ್ದರು..
ಇನ್ನಿಂಗ್ಸ್ ನ 1.4 ನೇ ಓವರ್ ನಲ್ಲಿ ಫೀಲ್ಡಿಂಗ್ ಮಾಡುವಾದ ಬಾಲ್ ಕ್ಯಾಚ್ ಹಿಡಿಯಲು ಯತ್ನಿಸಿದ ರೋಹಿತ್ ಅವರ ಹೆಬ್ಬೆರಳಿಗೆ ಗಂಭೀರ ಗಾಯವಾಗಿತ್ತು..
ಅಲ್ಲದೇ ಅವರ ಹೆಬ್ಬೆರಳಿನಿಂದ ರಕ್ತ ಸೋರಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.. ಆ ನಂತರ ತಕ್ಷಣವೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.. ಎಕ್ಸರೇ , ಸ್ಕಾನಿಂಗ್ ಕೂಡ ಮಾಡಿಸಲಾಗಿದೆ..
ಆದ್ರೆ ಗಾಯವಾದ ನಂತರವೂ ಪುನಃ ಮೈದಾನಕ್ಕೆ ಬಂದ ಕ್ಯಾಪ್ಟನ್ ರೋಹಿತ್ ಆಟವನ್ನ ಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು..
ನಾಯಕ ರೋಹಿತ್ ಶರ್ಮಾ ಗಾಯದ ನಡುವೆಯೂ ಅಂತಿಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಅಂತಿಮವಾಗಿ ರೋಹಿತ್ 51 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂದ್ಹಾಗೆ ಈ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಸೋಲನುಭವಿಸಿತು..
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಬಾಂಗ್ಲಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್ ಗಳಿಸಿತ್ತು.
ಈ ಮೊತ್ತ ಬೆನ್ನಟ್ಟಿದ ಭಾರತ ತಂಡವು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸುವ ಮೂಲಕ 5 ರನ್ ಗಳಿಂದ ಸೋಲನ್ನಪ್ಪಿತು.








