Rohith Sharma : ಇಂಡಿಯಾ VS ಬಾಂಗ್ಲಾ ಪಂದ್ಯದಲ್ಲಿ ಗಾಯಗೊಂಡ ರೋಹಿತ್ ಶರ್ಮಾ..!!
Umran Malik 151 KM/H to dismissed Najmul Husain#Umranmalik pic.twitter.com/3sXrcDgo3h
— Adnan Ansari (@AdnanAn71861809) December 7, 2022
ಮಿರ್ ಪುರದಲ್ಲಿ ನಡೆಯುತ್ತಿರುವ ಆತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ..
ಅವರನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..
ಫೀಲ್ಡಿಂಗ್ ವೇಳೆ ಕ್ಯಾಚ್ ಹಿಡಿಯಲು ಹೋದಾಗ ರೋಹಿತ್ ಶರ್ಮಾ ಅವರ ಹೆಬ್ಬೆರಳಿಗೆ ಬಾಲು ಜೋರಾಗಿ ಬಿದ್ದಿದೆ..
ಢಾಕಾದ ಶೇರ್ ಬಾಂಗ್ಲಾ ಸ್ಟೇಡಿಯಮ್ ನಲ್ಲಿ ಭಾರತ ಹಾಗೂ ಬಾಂಗ್ಲಾ ನಡುವೆ 2ನೇ ಪಂದ್ಯ ನಡೆಯುತ್ತಿದೆ..
ಇನ್ನಿಂಗ್ಸ್ನ 1.4 ನೇ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಅನಾಮುಲ್ ಹಕ್ ನೀಡಿದ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯಗೊಂಡರು.
ಚೆಂಡು ರೋಹಿತ್ ಶರ್ಮಾ ಅವರ ಹೆಬ್ಬೆರಳಿಗೆ ಬಡಿದ ಕಾರಣ ನೋವಿನಿಂದ ಬಳಲಿದರು. ಕೈಯಿಂದ ರಕ್ತ ಬರುತ್ತಿದ್ದ ಕಾರಣ ರೋಹಿತ್ ಶರ್ಮಾ ತಕ್ಷಣವೇ ಮೈದಾನದಿಂದ ಹೊರನಡೆದರು.
ರೋಹಿತ್ ಶರ್ಮಾರನ್ನ ಎಕ್ಸರೆಗಾಗಿ ಕರೆದೊಯ್ಯಲಾಗಿದೆ..
ನಾಯಕನ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಸ್ಟ್ಯಾಂಡ್ ಇನ್ ನಾಯಕನಾಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಾರಾ ಇಲ್ಲವಾ ಎನ್ನುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ. ವೈದ್ಯರ ತಪಾಸಣೆ ನಂತರವೇ ತಂಡದ ಮ್ಯಾನೇಜ್ಮೆಂಟ್ ಮುಂದಿನ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಿದೆ.
Rohit sharma got injured #Rohitsharma pic.twitter.com/4IAOHpt1Ua
— Adnan Ansari (@AdnanAn71861809) December 7, 2022
Rohith Sharma , injured in Ind VS bang , saakshatv