ಯುವಕರೊಂದಿಗೆ ಕಬಡ್ಡಿ ಆಡಿದ ನಟಿ ರೋಜಾ
ಹೈದರಾಬಾದ್ : ನಗರಪಾಲಿಕೆ ಚುನಾವಣಾ ಪ್ರಚಾರದ ವೇಳೆ ನಟಿ, ರಾಜಕಾರಣಿ ರೋಜಾ ಯುವಕರೊಂದಿಗೆ ಕಬಡ್ಡಿಯ ಆಡಿದ್ದಾರೆ.
ಪ್ರಚಾರದ ನಿಮ್ಮಿತ್ತ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿ ಅಧ್ಯಕ್ಷೆ ಆಗಿರುವ ರೋಜಾ ತಮ್ಮ ಮತ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಈ ವೇಳೆ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಟೂರ್ನಮೆಂಟ್ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಅಖಾಡಕ್ಕಿಳಿದು ಕಬಡ್ಡಿ..ಕಬಡ್ಡಿ ಎನ್ನುತ್ತಾ ಕೆಲಕಾಲ ಆಟವಾಡಿದ್ದಾರೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.