Rohit Sharma | ರೋಹಿತ್ ಶರ್ಮಾಗೆ ರೆಸ್ಟ್ ನೀಡಿದ್ದು ಯಾಕೆ..?
ಟೀಂ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ 20 ಸರಣಿಯನ್ನ ಆಡಲಿದೆ.
ಉಭಯ ತಂಡಗಳ ನಡುವಿನ ಮೊದಲ ಟಿ20 ಜೂನ್ 9 ರಂದು ದೆಹಲಿಯಲ್ಲಿ ನಡೆಯಲಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಂತಹ ಹಿರಿಯ ಆಟಗಾರರಿಗೆ ಸರಣಿಯಿಂದ ವಿಶ್ರಾಂತಿ ನೀಡಕಾಗುತ್ತದೆ.
ಆದರೆ, ನಾಯಕ ರೋಹಿತ್ ಶರ್ಮಾ ಗೆ ವಿಶ್ರಾಂತಿ ನೀಡಿದ ಬಗ್ಗೆ ಭಾರತದ ಮಾಜಿ ವೇಗಿ ಆರ್ಪಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಈ ಸರಣಿಗೆ ರೋಹಿತ್ಗೆ ವಿಶ್ರಾಂತಿ ಅಗತ್ಯವಿಲ್ಲ ಎಂದು ಆರ್ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

“ರೋಹಿತ್ ಈ ಸರಣಿಯಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ. ಅವರು ವಿಶ್ರಾಂತಿ ಪಡೆಯಬೇಕೋ ಅಥವಾ ಬೇಡವೋ ಎಂಬುದು ಅವರ ವೈಯಕ್ತಿಕ ಅಭಿಪ್ರಾಯ.
ವಿಶ್ರಾಂತಿ ಎನ್ನೋದು ಅವರು ಎಷ್ಟು ದಣಿದಿದ್ದಾರೆ ಅನ್ನೋದರ ಮೇಲೆ ನಿಂತಿದೆ. ಆದರೆ ಅವರಿಗೆ ವಿಶ್ರಾಂತಿ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಸುದೀರ್ಘ ಸರಣಿ ಎಂದು ನಮಗೆ ತಿಳಿದಿದೆ.
ರೋಹಿತ್ ನಾಯಕರಾಗಿರುವುದರಿಂದ ಅವರು ಖಂಡಿತವಾಗಿಯೂ ಈ ಸರಣಿಯಲ್ಲಿ ಆಡಬೇಕಿತ್ತು.ಐಪಿಎಲ್ನಲ್ಲಿ ಕಳೆದ ಕೆಲವು ಸೀಸನ್ಗಳಲ್ಲಿ ರೋಹಿತ್ 400 ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ ಎಂದು ಹೇಳಿದರು.








