ಜನರ ಋಣ ತೀರಿಸುತ್ತೇನೆ: ಮುನಿರತ್ನ
ಬೆಂಗಳೂರು: ಮತಗಟ್ಟೆಗಳ ಸಮೀಕ್ಷೆಯಂತೆ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಬೆಳಿಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಅಂಚೆಮತಗಳು ಸೇರಿದಂತೆ ಪ್ರತಿಸುತ್ತಿನಲ್ಲೂ ಮುನಿರತ್ನ ಅವರ ಮುನ್ನಡೆ ಅಂತರ ಕಡಿಮೆಯಾಗಲೇ ಇಲ್ಲ. ಪ್ರತಿ ಸುತ್ತಿನಲ್ಲೂ ಮೂರು, ನಾಲ್ಕು, ಐದು ಸಾವಿರ..ಹೀಗೆ ಮುನಿರತ್ನ ಅವರ ಮುನ್ನಡೆಯ ಅಂತರ ಹೆಚ್ಚುತ್ತಲೇ ಹೋಯಿತು.
ಅಂಚೆ ಮತಗಳ ಮೂಲಕ ಮುನಿರತ್ನಗೆ 253ಗಳು ಬಂದರೆ, ಕಾಂಗ್ರೆಸ್ನ ಕುಸುಮಾ ಪರ 118 ಬಂದವು. ಆಗಲೂ ಸಹ ಮತಗಳ ಅಂತರ 135 ಆಗಿತ್ತು.
ಮೊದಲ ಸುತ್ತಿನಲ್ಲಿ ಮುನಿರತ್ನ ಅವರು 3130 ಮತಗಳನ್ನು ಪಡೆದುಕೊಂಡು ಕಾಂಗ್ರೆಸ್ನ ಕುಸುಮಾಗಿಂತ 1049 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದರು. ಈ ಅಂತರ ಪ್ರತಿಸುತ್ತಿನಲ್ಲೂ ಹೆಚ್ಚುತ್ತಲೇ ಹೋಯಿತು. ಈಗ 20ನೇ ಸುತ್ತು ಮುಗಿದಿದ್ದು, ಮುನಿರತ್ನ 10,3291 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 58,743 ಮತ ಗಳಿಸಿದ್ದಾರೆ. ಸುಮಾರು 57,672 ಮತಗಳ ಅಂತರದಿಂದ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಹ್ಯಾಟ್ರಿಕ್ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ ಮುನಿರತ್ನ
ರಾಜರಾಜೇಶ್ವರಿ ನಗರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಿದ ಖ್ಯಾತಿಗೆ ಪಾತ್ರರಾಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ತಮ್ಮ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
3ನೇ ಬಾರಿ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಅವರ ಋಣ ತೀರಿಸಲು ಆಗಲ್ಲ. ಮೊದಲ ಚುನಾವಣೆಯಲ್ಲಿ 17 ಸಾವಿರ ಮತಗಳ ಅಂತರದಿಂದ ಗೆದ್ದಿದೆ, 2 ನೇ ಬಾರಿ 26 ಸಾವಿರ ಮತಗಳ ಅಂತರದಿಂದ ಗೆಲುವು ನೀಡಿದ್ದರು. ಈ ಬಾರಿಯ ಗೆಲುವು 57 ಸಾವಿರ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆರ್.ಆರ್ ನಗರ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗಬೇಕು. ಬೆಂಗಳೂರು ಈಗಾಗಲೇ ಸಾಕಷ್ಟು ಅಭಿವೃದ್ಧಿಯಾಗಿದೆ. ಆರ್.ಆರ್ ನಗರ ಕ್ಷೇತ್ರದ ಅಭಿವೃದ್ಧಿಗೆ ದಿನದ 20 ಗಂಟೆಯೂ ಕೆಲಸ ಮಾಡಿ ಜನರ ಋಣ ತೀರಿಸುತ್ತೇನೆ ಎಂದು ಮುನಿರತ್ನ ಭರವಸೆ ನೀಡಿದರು.
ನಾನು ಪ್ರಚಾರದ ವೇಳೆ ಪ್ರತಿ ಕ್ಷಣವೂ ಸತ್ಯವನ್ನೇ ಮಾತನಾಡಿದ್ದೇನೆ. ಮಹಿಳೆಯರ ಬಗ್ಗೆ ಎಂದೂ ಕೀಳಾಗಿ ಮಾತನಾಡಿಲ್ಲ, ನಿಂದಿಸಿಲ್ಲ. ಆದರೆ, ಕಾಂಗ್ರೆಸ್ನವರು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಆದರೆ, ಮುಖ್ಯಮಂತ್ರಿಗಳು, ಸಚಿವರು, ನಟ ದರ್ಶನ್ ಹಾಗೂ ಬಿಜೆಪಿ ಕಾರ್ಯಕರ್ತರ ಪ್ರಚಾರದಿಂದ ಬಾರಿ ಅಂತರದ ಬಹುಮತ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel