ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಮತ ಎಣಿಕೆ ಭರದಿಂದ ಸಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಮುನ್ನಡೆಯ ನಾಗಾಲೋಟ ಮುಂದುವರೆದಿದೆ.
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಮೊದಲು ಅಂಚೆ ಮತಗಳ ಅಣಿಕೆ ಆರಂಭವಾಯಿತು. ಅಂಚೆ ಮತಗಳಲ್ಲೂ ಆರ್.ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 253, ಕಾಂಗ್ರೆಸ್‍ನ ಕುಸುಮಾ ಪರ 118, ಜೆಡಿಎಸ್‍ನ ಕೃಷ್ಣಮೂರ್ತಿಗೆ 34 ಮತಗಳು ಬಂದವು.
ಶಿರಾದಲ್ಲೂ ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಮುನ್ನಡೆ ಸಾಧಿಸಿದರು. ರಾಜೇಶ್‍ಗೌಡ 70, ಕಾಂಗ್ರೆಸ್‍ನ ಟಿ.ಬಿ ಜಯಚಂದ್ರಗೆ 33, ಜೆಡಿಎಸ್‍ನ ಅಮ್ಮಾಜಮ್ಮಗೆ 15 ಮತಗಳು ಬಂದವು.
ಆರ್.ಅರ್ ನಗರ-ಮೊದಲ ಸುತ್ತು
ಬಿಜೆಪಿ-ಮುನಿರತ್ನ-ಮುನ್ನಡೆ, 3130
ಕಾಂಗ್ರೆಸ್-ಕುಸುಮಾ-ಹಿನ್ನೆಡೆ-2082
ಜೆಡಿಎಸ್-ಕೃಷ್ಣಮೂರ್ತಿ-ಹಿನ್ನೆಡೆ-1100
ಶಿರಾ-ಮೊದಲ ಸುತ್ತು
ಬಿಜೆಪಿ-ರಾಜೇಶ್‍ಗೌಡ-ಮುನ್ನೆಡೆ-3224
ಕಾಂಗ್ರೆಸ್-ಟಿ.ಬಿ ಜಯಚಂದ್ರ-ಹಿನ್ನೆಡೆ-2329
ಜೆಡಿಎಸ್-ಅಮ್ಮಾಜಮ್ಮ-ಹಿನ್ನೆಡೆ-1135
ಹೀಗೆ ಮೊದಲ ಸುತ್ತಿನಿಂದಲೂ ಆರ್.ಆರ್ ನಗರದಲ್ಲಿ ಬಿಜೆಪಿಯ ಮುನಿರತ್ನ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಒಟ್ಟು 25 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದ್ದು, ವಿಜಯಮಾಲೆ ಯಾರ ಕೊರಳಿಗೆ ಎಂಬುದು ಕೆಲವೇ ಹೊತ್ತಿನಲ್ಲಿ ಬಹಿರಂಗವಾಗಲಿದೆ.