ಆರ್ ಆರ್ ಆರ್ ಸಿನಿಮಾದ `ದೋಸ್ತಿ’ ಸಾಂಗ್ ರಿಲೀಸ್ RRR saaksha tv
ಹೈದರಾಬಾದ್ : ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಚಿತ್ರದ ದೋಸ್ತಿ ಸಾಂಗ್ ರಿಲೀಸ್ ಆಗಿದೆ.
ನಿರ್ದೇಶಕ ರಾಜಮೌಳಿಯವರು ಭರವಸೆ ನೀಡಿದಂತೆ ‘ಆರ್‍ಆರ್‍ಆರ್’ ದೋಸ್ತಿ ಎಂಬ ಟೈಟಲ್ ನ ಮ್ಯೂಸಿಕಲ್ ವೀಡಿಯೋವನ್ನು ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿದ್ದಾರೆ.
ಈ ಹಾಡನ್ನು ಅನಿರುದ್ಧ್ ರವಿಚಂದ್ರ, ವಿಜಯ್ ಯೇಸುದಾಸ್, ಅಮಿತ್ ತ್ರಿವೇದಿ, ಹೇಮಚಂದ್ರ ಮತ್ತು ಯಾಜಿನ್ ನಿಜಾರ್ ಹಾಡಿದ್ದಾರೆ.
ಇದೀಗ ಬಿಡುಗಡೆಗೊಂಡಿರುವ ದೋಸ್ತಿ ಹಾಡಿನಲ್ಲಿ ಐವರು ಗಾಯಕರೊಂದಿಗೆ ಕೊನೆಯಲ್ಲಿ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್ ಟಿಆರ್ ಕಾಣಿಸಿಕೊಂಡಿದ್ದಾರೆ.









