#RRR ಪಕ್ಕಾ ಹಳ್ಳಿ ನಾಟು.. ವೀರಾ ನಾಟು ನಾಟು… ಸಾಂಗ್ ರಿಲೀಸ್
ಜ್ಯೂನಿಯರ್ ಎನ್ ಟಿ ಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಒಟ್ಟಾಗಿ ಅಭಿನಯಿಸುತ್ತಿರುವ ಸಿನಿಮಾ ಆರ್ ಆರ್ ಆರ್. ಈ ಬಿಗ್ ಬಜೆಟ್ ಸಿನಿಮಾದ ಮೇಲೆ ಆಕಾಶದಷ್ಟು ನಿರೀಕ್ಷೆಗಳಿವೆ.
ಬಾಹುಬಲಿ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾ ಅನ್ನೋದು ಒಂದು ಕಡೆ..
ತೆಲುಗು ಸಿನಿಮಾ ಇಂಡಸ್ಟ್ರೀಯ ಎರಡು ದಿಗ್ಗಜ ಕುಡಿಗಳು ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಮಾದ ಮೇಲೆ ನಿರೀಕ್ಷೆಗಳನ್ನು ದುಪ್ಪುಟ್ಟು ಮಾಡಿವೆ.
ಈಗಾಗಲೇ ಚಿತ್ರತಂಡ ಟೀಸರ್.. ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಈ ಸದ್ದನ್ನ ಮತ್ತಷ್ಟು ಡಬಲ್ ಮಾಡುವ ನಿಟ್ಟಿನಲ್ಲಿ ಇವತ್ತು ಹಳ್ಳಿ ನಾಟು ಹಾಡು ರಿಲೀಸ್ ಆಗಿದೆ.
ಪಕ್ಕಾ ಮಾಸ್ ಬೀಟ್ ಇರುವ ಈ ಸಾಂಗ್ ನಲ್ಲಿ ಎನ್ ಟಿಆರ್, ರಾಮ್ ಚರಣ್ ಒಟ್ಟಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ.
ಇದು ಬೆಳ್ಳಿತೆರೆಗೆ ಬೆಂಕಿ ಹಚ್ಚೋದು ಗ್ಯಾರಂಟಿ ಎನ್ನುವಂತಿದೆ. ಮುಖ್ಯವಾಗಿ ಎನ್ ಟಿಆರ್, ರಾಮ್ ಚರಣ್ ಒಟ್ಟಿಗೆ ಒಂದೇ ಸ್ಟೆಪ್ ಹಾಕಿರೋದು ಕಣ್ಣಿಗೆ ಹಬ್ಬ ನೀಡುತ್ತಿದೆ.
ಯಾಕಂದ್ರೆ ರಾಮ್ ಚರಣ್, ಎನ್ ಟಿಆರ್ ತೆಲುಗು ಸಿನಿಮಾದ ಸ್ಟಾರ್ ನಟರು, ಜೊತೆಗೆ ಡ್ಯಾನ್ಸ್ ನಲ್ಲಿ ಸೂಪರ್ ಸ್ಟಾರ್ ಗಳು.
ಈ ಇಬ್ಬರ ಡ್ಯಾನ್ಸ್ ಗೆ ಪ್ರತ್ಯೇಕವಾದ ಅಭಿಮಾನಿಗಳ ದಂಡೇ ಇದೆ. ಇಂತಹ ಇಬ್ಬರೂ ಒಂದೇ ಹಾಡಿಗೆ ಒಂದೇ ರೀತಿ ಡ್ಯಾನ್ಸ್ ಮಾಡಿದ್ದಾರೆ. ಇದು ಉಭಯರ ಅಭಿಮಾನಿಗಳಿಗೂ ಸಖತ್ ಕಿಕ್ ನೀಡುತ್ತಿದೆ.










