ಜುಲೈ 15ರಂದು ‘RRR’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್
ರಾಜಮೌಳಿ ಸಾರಥ್ಯದ ರಾಮ್ ಚರಣ್ , ಜ್ಯೂ. NTR ನಟನೆಯ ಭಾರತದ ಬಹುನಿರೀಕ್ಷೆಯ RRR ಸಿನಿಮಾದ ಅಪ್ ಡೇಟ್ ಒಂದನ್ನ ಸಿನಿಮಾ ತಂಡ ಬಿಟ್ಟುಕೊಟ್ಟಿದೆ.. ‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಇದೇ ತಿಂಗಳು ಜುಲೈ 15 ಬೆಳಿಗ್ಗೆ 11 ಗಂಟೆಗೆ ರಿಲೀಸ್ ಮಾಡೋದಾಗಿ ಸಿನಿಮಾ ತಂಡ ತಿಳಿಸಿದೆ.
ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತೆಲುಗು, ಕನ್ನಡ , ತಮಿಳು ಮಲೆಯಾಳಂ, ಹಿಂದಿ ಯಲ್ಲಿ ರಿಲೀಸ್ ಆಗಲಿದ್ದು, ಈ ಮೇಕಿಂಗ್ ವಿಡಿಯೋ ಸಹ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಲಿದೆ. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾವನ್ನು ಡಿ.ವಿ.ವಿ. ದಾನಯ್ಯ ತಮ್ಮ ಡಿ.ವಿ.ವಿ. ಎಂಟರ್ ಟೈನ್ ಮೆಂಟ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.
ಅಭಿನಯ ಬ್ರಹ್ಮನಿಗೆ ಪದ್ಮ | #AnanthnagforPadma ಅಭಿಯಾನ
‘ಆರ್ ಆರ್ ಆರ್’ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ NTR ಹೊರತಾಗಿ ಬಾಲಿವುಡ್ ನಟರಾದ ಅಜಯ್ ದೇವಗನ್ , ಆಲಿಯಾ ಭಟ್, ಒಲಿವಿಯಾ ಮೊರಿಸ್, ಶ್ರೀಯಾ ಸರನ್, ರೇ ಸ್ಟೀವನ್ ಸನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.