ಅಪ್ಪುವಿನ ನೆನಪಲ್ಲಿ ‘ಗೆಳೆಯ ಗೆಳೆಯ’ ಹಾಡು ಹಾಡಿದ ಜ್ಯೂ. NTR
ಅಪ್ಪು ನಮ್ಮನ್ನೆಲ್ಲ ಅಗಲಿ ಸುಮಾರು ಒಂದೂವರೆ ತಿಂಗಳೇ ಕಳೆದುಹೋಗಿದೆ.. ಆದ್ರೂ ಆ ನೋವು ಮಾತ್ರ ಮಾಸಿಲ್ಲ. ಆ ಕಹಿ ಸತ್ಯ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.. ಕನ್ನಡ ಸಿನಿಮಾರಂಗವಷ್ಟೇ ಅಲ್ದೇ ಪರ ಭಾಷಾ ನಟರು ಕೂಡ ಅಪ್ಪು ನಿಧನದಿಂದ ಆಘಾತಕ್ಕೆ ಒಳಗಾಗಿದ್ದಾರೆ.. ಟಾಲಿವುಡ್ ನ ಜ್ಯೂನಿಯರ್ NTR ಅವರು ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಬಹಳ ಆಪ್ತ ಗೆಳೆತನ ಹೊಂದಿದ್ದರು.. NTR ಅಪ್ಪು ಅಂತಿಮ ದರ್ಶನಕ್ಕೆ ಬಂದಾಗ ಗೆಳೆಯನನ್ನ ಕಳೆದುಕೊಂಡು ಕಣ್ಣೀರು ಹಾಕಿದ್ದರು..
ಸದ್ಯ RRR ಸಿನಿಮಾದ ಪ್ರಚಾರ ಕಾರ್ಯ ಶುರು ಮಾಡಿರು RRR ತಂಡವು ಬೆಂಗಳೂರಿಗೆ ಆಗಮಿಸಿತ್ತು.. ಈ ವೇಳೆ ಜ್ಯೂ. NTR ಸುದ್ದಿಗೋಷ್ಠಿಯಲ್ಲಿ ಅಪ್ಪು ನೆನೆದು ಭಾವುಕರಾದ್ರು.. ಮೊದಲಿಗೆ ಕನ್ನಡದಲ್ಲಿ ಮಾತನಾಡಿದ NTR “ಗೆಲೆಯ ಗೆಳೆಯ ಗೆಲುವು ನಿನದಯ್ಯ” ಹಾಡು ಹಾಡಿ , ನಾನು ಈ ಹಾಡನ್ನು ಪುನೀತ್ಗಾಗಿ ಎಂದಿಗೂ ಹೇಳಿರಲಿಲ್ಲ ,ಇದೇ ಮೊದಲು ಇದೇ ಕೊನೆಯ ಬಾರಿ. ಈ ಹಾಡನ್ನ ಮತ್ತೆ ಹಾಡಲ್ಲ ಎಂದು ಭಾವುಕರಾದರು..
This will surely make you Emotional!!
Young Tiger #JrNTR Sings #GeleyaGeleya at #RRRMovie Press Meet @ Banglore! #PuneethRajkumar #NTR #RRR #TeluguFilmNagar pic.twitter.com/esg4pQ74I0— CELLULIOD UPDATES (@celluloid_updat) December 10, 2021








