RRR ಮೇಲೆ KGF ಎಫೆಕ್ಟ್ : ನೂರು ಕೋಟಿ ಗಳಿಸಲು ಒಂದು ವಾರ..
ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆದ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಆರ್ ಆರ್ ಆರ್ (ರೌದ್ರ .. ರಣಂ .. ರುಧಿರಂ) ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿತ್ತು.
ಓವರ್ ಸೀಸ್ ನಲ್ಲಿ ಈ ಸಿನಿಮಾ ಮೂನ್ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಬಾಲಿವುಡ್ ನಲ್ಲಿ 300 ಕೋಟಿ ವಸೂಲಿ ಮಾಡಿದೆ.
ಇತ್ತೀಚೆಗಷ್ಟೇ ಈ ಚಿತ್ರದ ನಾಲ್ಕು ವಾರದ ಕಲೆಕ್ಷನ್ ಅನ್ನು ಚಿತ್ರತಂಡ ಬಹಿರಂಗಪಡಿಸಿದೆ. RRR ಚಲನಚಿತ್ರ ವಿಶ್ವಾದ್ಯಂತ ರೂ. 1100 ಕೋಟಿ ಸಂಗ್ರಹಿಸಿದೆ.
ಎರಡು ತೆಲುಗು ರಾಜ್ಯಗಳಲ್ಲಿ ಚಿತ್ರವು ರೂ. 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದರೆ.
ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಸುಮಾರು ನೂರು ಕೋಟಿ ಕಲೆಕ್ಷನ್ ಮಾಡಿದೆ.
ಭಾರತವೊಂದರಲ್ಲೇ ಈ ಸಿನಿಮಾ 700 ಕೋಟಿ ಗಳಿಕೆ ಮಾಡಿದೆ.
ಈ ಮೂಲಕ ಬಾಹುಬಲಿ ನಂತರ RRR ಎರಡನೇ ಸ್ಥಾನದಲ್ಲಿದೆ.
ಆದರೆ, ಚಿತ್ರ 1,100 ಕೋಟಿ ಗಳಿಸಿದೆ, ಆದರೆ ಶೇರ್ ಕೇವಲ ರೂ. 600 ಕೋಟಿ.
ಸದ್ಯ ಐದನೇ ವಾರಕ್ಕೆ ಕಾಲಿಡುತ್ತಿರುವ RRR ಮೇಲೆ ‘KGF2’ ಎಫೆಕ್ಟ್ ಹೆಚ್ಚಾಗಿದೆ.
ಕೆಜಿಎಫ್ 2 ಕ್ಕಿಂತ ಮೊದಲು 1000 ಕೋಟಿ ಕಲೆಕ್ಷನ್ ಮಾಡಿದ್ದ RRR ನಂತರ 100 ಕೋಟಿ ಕಲೆಕ್ಷನ್ ಮಾಡಲು ಒಂದು ವಾರ ತೆಗೆದುಕೊಂಡಿದೆ. rrr-movie-fourth-week-box-office-collections