ಸೋಷಿಯಲ್ ಮೀಡಿಯಾದಲ್ಲಿ ‘RRR’ ಪೋಸ್ಟರ್ ಸಂಚಲನ : ಸಸುದೀಪ್ , ವಿರಾಟ್ , ಪವನ್ ಕಲ್ಯಾಣ್ ರೋಹಿತ್ ಒಟ್ಟಾಗಿ ದರ್ಶನ…!
ಭಾರತ ಸಿನಿಮಾರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ರಾಜಮೌಳಿ ಸಾರಥ್ಯದ RRR ಸಿನಿಮಾ ಸಾಕಷ್ಟು ವಿಚಾರಗಳಿಮದ ಸುದ್ದಿ ಮಾಡಿದೆ.. ಆದ್ರೆ ಇತ್ತೀಚೆಗೆ ಬಿಡುಗಡೆಯಾಗಿರುವ ಪೋಸ್ಟರ್ ಸೋಷಿಯಲ್ ಮೀಡಿಯಾಗೆ ಬೆಂಕಿ ಇಟ್ಟಿದೆ.. ಹೌದು..
ಕೊರೊನಾ 2ನೇ ಅಲೆ ಮುಗಿಸಿ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಅಪ್ ಡೇಟ್ ನೀಡಿತ್ತು. ಅಪ್ ಡೇಟ್ ಜೊತೆಗೆ ಚಿತ್ರದ ಹೊಸ ಪೋಸ್ಟರ್ ಅನ್ನು ಶೇರ್ ಮಾಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿತ್ತು ಸಿನಿಮಾತಂಡ. ಪೋಸ್ಟರ್ ನಲ್ಲಿ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದರು. ಈ ಪೋಸ್ಟರ್ ಶೇರ್ ಮಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು.
ಆರ್ ಆರ್ ಆರ್ ಪೋಸ್ಟರ್ ನಲ್ಲಿ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಜೊತೆಗೆ ಕನ್ನಡದ ನಟ ಕಿಚ್ಚ ಸುದೀಪ್, ಪವನ್ ಕಲ್ಯಾಣ್, ಮಹೇಶ್ ಬಾಬು ಹಾಗೂ ಸಿನಿಮಾದವರ ಜೊತೆಗೆ ಕ್ರಿಕೆಟಿಗರು ಎಂಟ್ರಿ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ರಾಜಮೌಳಿ ಸಿನಿಮಾದಲ್ಲಿ ಜಾಲಿ ರೈಡ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದೆ.
ಆದ್ರೆ ಅಸಲಿಯತ್ತು ಬೇರೆನೇ ಇದೆ.. ಹೌದು. ಇವೆಲ್ಲಾ ಎಡಿಟೆಡ್ ಫೋಟೋಗಳಾಗಿವೆ.. ನೆಟ್ಟಿಗರು ‘RRR’ ಪೋಸ್ಟರ್ ಟ್ರೋಲ್ ಮಾಡಲಿಕ್ಕೆ ಜ್ಯೂನಿಯರ್ NTR ಬದಲಾಗಿ ಬೇರೆ ಬೇರೆ ನಟರ ಫೋಟೋಗಳನ್ನ ಅವರ ಜಾಗದಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈ ಫೋಟೋಗಳು ಟ್ರೆಂಡಿಂಗ್ ನಲ್ಲಿದೆ.
ಅಲ್ಲದೇ ‘RRR’ ನಲ್ಲಿ ರೋಹಿತ್-ವಿರಾಟ್ RRR ಫೋಸ್ಟರ್ ನಲ್ಲಿ ಸಿನಿಮಾದವರು ಮಾತ್ರವಲ್ಲದೇ ಕ್ರಿಕೆಟಿಗರು ಎಂಟ್ರಿ ಕೊಟ್ಟಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಬರುತ್ತಿರುವ ಹಾಗೆ ಫೋಟೋ ಎಡಿಟ್ ಮಾಡಿ, ಟಿ20 ವರ್ಲ್ಡೈ ಕಪ್ ಗೆ ತಯಾರಿ ನಡೆಸುತ್ತಿದ್ದಾರೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಟ್ರಾಫಿಕ್ ಪೊಲೀಸ್ ನವರು ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಗೆ ಹೆಲ್ಮೆಟ್ ಹಾಕಿದ್ದಾರೆ. ಹೆಲ್ಮೆಟ್ ಧರಿಸಿರುವ ಫೋಟೋ ಶೇರ್ ಮಾಡಿ ಪೋಸ್ಟರ್ ಮೂಲಕ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ ಎಂದೆಲ್ಲಾ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ.. ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಅಭಿನಯದ RRR ಸಿನಿಮಾದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿಸಿದೆ.