RRR ಪೋಸ್ಟರ್ ವಿವಾದ : ಹಾಲಿವುಡ್ ಚಿತ್ರದಿಂದ ಪೋಸ್ಟರ್ ಕಾಪಿ..!
ಹಾಲಿವುಡ್ ಲೆವೆಲ್ ಗೆ ಸಿನಿಮಾ ಮಾಡುವ ರಾಜಮೌಳಿ ಸಿನಿಮಾ ಒಂದು ಬರ್ತಿದೆ ಅಂದ್ರೆ ಇಡೀ ಭಾರತೀಯ ಸಿನಿಮಾರಂಗದ ಗಮನ ಆ ಚಿತ್ರದ ಕಡೆ ನೆಟ್ಟಿರುತ್ತೆ. ಆದ್ರೆ ರಾಜಮೌಳಿಯ ಕೆಲವು ಐಡಿಯಾಗಳು ಹಾಲಿವುಡ್ ಹಾಗೂ ಇನ್ನಿತರ ಸಿನಿಮಾಗಳಿಂದ ಕದ್ದಿರುವುದು ಅಥವಾ ಹಾಲಿವುಡ್ ಸಿನಿಮಾಗಳಿಂದ ಸ್ಫೂರ್ತಿಯಾಗಿಸಿಕೊಂಡು ಮಾಡ್ತಾರೆ ಎಂಬ ಆರೋಪವೂ ಅವರ ಇದೆ. ಅವರು ಯಾವುದೇ ಸಿನಿಮಾ ಮಾಡಿದ್ರು ಈ ಸಿನಿಮಾದಲ್ಲಿ ಇಂತಹದೊಂದಾದ್ರು ಆರೋಪ ಕೇಳಿ ಬರುತ್ತೆ. ಅದರಂತೆ ಇದೀಗ ಅವರ ಸಾರಥ್ಯದ ಬಹುನಿರೀಕ್ಷೆಯ RRR ಸಿನಿಮಾ ಮೇಲೂ ಇಂತಹದ್ದೇ ಒಂದು ವಿವಾದ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
ಕೊರೊನಾ ಕಾಲರ್ ಟ್ಯೂನ್ನಿಂದ ದಿನಕ್ಕೆ ಎಷ್ಟು ಕೋಟಿ ಗಂಟೆ ವ್ಯರ್ಥ ಗೊತ್ತಾ?
ಸಂದ್ಹಾಗೆ ಇತ್ತೀಚೆಗೆಷ್ಟೇ ಸಿನಿಮಾ ತಂಡ ಚಿತ್ರದ ರಿಲೀಸ್ ಡೇಟ್ ರಿವೀಲ್ ಮಾಡೋ ಮೂಲಕ ಹೊಸದೊಂದು ಪೋಸ್ಟರ್ ರಿಲೀಸ್ ಮಾಡಿತ್ತು. ಆ ಪೋಸ್ಟರ್ ನೋಡಿ ಯಂಗ್ ಟೈಗರ್ ಜ್ಯೂ. NTR ಹಾಗೂ ರಾಮ್ ಚರಣ್ ಅಭಿಮಾನಿಗಳು ಫಿದಾ ಆಗಿದ್ರು. ಈ ಪೋಸ್ಟರ್ನಲ್ಲಿ ಎನ್ಟಿಆರ್ ಬೈಕ್ ಮೇಲೆ ಹಾಗೂ ರಾಮ್ ಚರಣ್ ಕುದುರೆ ಮೇಲೆ ಸವಾರಿ ಹೊರಟಿರುವ ದೃಶ್ಯವಿದೆ. ಇದನ್ನ ನೋಡಿವ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು, ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಫೆ.1ರಂದು ಆಯೋಜಿಸಲು ಯೋಜಿಸಿದ್ದ ಸಂಸತ್ತಿನತ್ತ ಪಾದಯಾತ್ರೆ ರದ್ದಾಗುವ ಸಾಧ್ಯತೆ..!
ಆದ್ರೆ ಇದೀಗ ಈ ಪೋಸ್ಟರ್ ಕದ್ದಿರುವುದು ಎಂಬ ಆರೋಪ ಕೇಳಿ ಬಂದಿದೆ. ಹೌದು 2007ರಲ್ಲಿ ತೆರೆಕಂಡಿದ್ದ ‘ಗೋಸ್ಟ್ ರೈಡರ್’ ಚಿತ್ರದ ಪೋಸ್ಟರ್ನಿಂದ ಸ್ಫೂರ್ತಿಯಾಗಿಸಿಕೊಂಡು RRR ಪೋಸ್ಟರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏಕಂದ್ರೆ, ಗೋಸ್ಟ್ ರೈಡರ್ ಪೋಸ್ಟರ್ ನಲ್ಲೂ ಇದೇ ಕಾಂಬಿನೇಷನ್ ಇತ್ತು. ಒಬ್ಬರ ಬೈಕ್ ಮೇಲೆ ಇನ್ನೊಬ್ಬರು ಕುದುರೆ ಮೇಲೆ ಸವಾರಿ ಮಾಡುತ್ತಿರುವುದು. ಅದೇ ಪೋಸ್ಟರ್ ಹೋಲುವಂತೆ RRR ಪೋಸ್ಟರ್ ಬಂದಿದೆ ಎಂದು ನೆಟ್ಟಿಗರು ವಾದಿಸಲು ಶುರುಮಾಡಿದ್ದಾರೆ. ಇನ್ನೂ ಅಕ್ಟೋಬರ್ 13 ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಈ ಸಿನಿಮಾದಲ್ಲಿ ರಾಮ್ ಚರಣ್, ಜ್ಯೂ, NTR, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಅಂತರಾಷ್ಟ್ರೀಯ ತಾರೆಯರು ಇದ್ದಾರೆ.
ಛತ್ತೀಸಗಡದಲ್ಲಿ 12 ಮಹಿಳೆಯರು ಸೇರಿ 24 ಮಂದಿ ನಕ್ಸಲರು ಶರಣು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel