ರಾಜಮೌಳಿ “RRR” ಗಾಗಿ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದ “ಗಂಗೂಬಾಯಿ ಕಥಿಯಾವಾಡಿ”..!
ರಾಜಮೌಳಿ… ಸಂಜಯ್ ಲೀಲಾ ಬನ್ಸಾಲಿ… ಇವರಿಬ್ಬರೂ ಕೂಡ ಭಾರತದ ಸ್ಟಾರ್ ನಿರ್ದೇಶಕರಾಗಿ ಒಗುರುತಿಸಿಕೊಂಡಿರುವವರೇ.. ಇಬ್ಬರ ಸಿನಿಮಾಗಳ ಮೇಲೆ ಜನರ ನಿರೀಕ್ಷೆ ಆಕಾಶದಷ್ಟಿರುತ್ತೆ.. ಇಬ್ಬರ ಸಿನಿಮಾಗಳ ಸ್ಕ್ರೀನ್ ಪ್ಲೇ ಜನರನ್ನ ಮೂಕವಿಸ್ಮಿತರನ್ನಾಗಿಸುತ್ತೆ.. ಒಟ್ಟಾರೆ ಈ ಇಬ್ಬರೂ ನಿರ್ದೇಶಕರೂ ಕೂಡ ಹಿಟ್ ಸಿನಿಮಾಗಳನ್ನ ನೀಡೋದ್ರಲ್ಲಿ ನಿಸ್ಸೀಮರು..
ಪ್ರಸ್ತುತ ಪದ್ಮಾವತ್ ಖ್ಯಾತಿಯ ಸಂಜಯ್ ಲೀಲಾ ಬನ್ಸಾಲಿ ಅವರ ಸಾರಥ್ಯದ ಆಲಿಯಾ ಭಟ್ ನಟನೆಯ ಭಾರತದ ಬಹುನಿರೀಕ್ಷೆಯ ಸಿನಿಮಾ “ಗಂಗೂಬಾಯಿ ಕಥಿಯಾವಾಡಿ” ತೆರೆಕಾಣಬೇಕಿದೆ.. ಈ ಸಿನಿಮಾಗಾಗಿ ಇಡೀ ಭಾರತೀಯ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.. ಮತ್ತೊಂದೆಡೆ ಬಾಹುಬಲಿ ಖ್ಯಾತಿಯ ರಾಜಮೌಳಿ ಇಬ್ಬರು ಟಾಲಿವುಡ್ ನ ಯಂಗ್ ಸೂಪರ್ ಸ್ಟಾರ್ ಗಳನ್ನ ಒಟ್ಟಿಗೆ ತೆರೆಮೇಲೆ ತೋರಿಸಲು ಸಜ್ಜಾಗಿದ್ದಾರೆ.. ರಾಮ್ ಚರಣ್ , ಜ್ಯೂನಿಯರ್ NTR ನಟನೆಯ RRR ಸಿನಿಮಾದ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡೋಕೆ ರೆಡಿಯಾಗಿದ್ದಾರೆ..
ಆದ್ರೆ ಈ ಸಿನಿಮಾ ರಿಲೀಸ್ ಆಗೋವಾಗಲೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ನಟನೆಯ “ಗಂಗೂಬಾಯಿ ಕಥಿಯಾವಾಡಿ” ಸಿನಿಮಾ ತೆರೆಕಾಣಲಿತ್ತು.. ಹಾಗದಲ್ಲಿ RRR ಹಾಗೂ ಗಂಗೂಬಾಯಿ ಕಥಿಯಾವಾಡಿ ಎರೆಡೂ ಸಿನಿಮಾಗಳ ನಡುವೆ ಕ್ಲಾಶ್ ಆಗುವ ಆತಂಕ ಇತ್ತು.. ಎರೆಡೂ ಸಿನಿಮಾಗಳು ಕೂಡ ಬಿಗ್ ಬಜೆಟ್ ಸಿನಿಮಾಗಳೇ.. ಕೇವಲ ಭಾರತ ಅಲ್ದೇ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಲಿವೆ..
ಹೀಗಾಗಿ ರಿಲೀಸ್ ವಿಚಾರಕ್ಕೆ ಕೆಲ ಗೊಂದಲಗಳಿದ್ದವು.. ಆದ್ರೀಗ RRR ಸಿನಿಮಾಗಾಗಿ ಗಂಗೂಭಾಯಿ ಕಾಥೇಯವಾಡಿ ಸಿನಿಮಾದ ರಿಲೀಸ್ ದಿನಾಂಕವನ್ನ ಪೋಸ್ಟ್ ಪೋನ್ ಮಾಡಲಾಗಿದೆ..ಇನ್ನೂ ಗಂಗೂಭಾಯಿ ಹಾಗೂ RRR ಎರೆಡೂ ಸಿನಿಮಾಗಳಲ್ಲಿ ಕೂಡ ನಟಿ ಆಲಿಯಾ ಭಟ್ ಅವರೇ ನಾಯಕಿ ಅನ್ನೋದು ಗಮನನಿಸಬೇಕಾದ ಸಂಗತಿ… ಚಿತ್ರ 2022 ಜನವರಿ 6ರಂದು ರಿಲೀಸ್ ಆಗಬೇಕಿತ್ತು.
ಆದರೆ ಈಗ ಈ ಚಿತ್ರದ ರಿಲೀಸ್ ದಿನಾಂಕ ಮತ್ತೆ ಬದಲಾಗಿದೆ. ಆಲಿಯಾ ಭಟ್ ಅಭಿನಯದ ಈ ಸಿನಿಮಾ ಇನ್ನೂ ಒಂದು ತಿಂಗಳು ಮುಂದೆ ಹೋಗಿದೆ.ಅಂದ್ಹಾಗೆ ಗಂಗೂಬಾಯಿ ಚಿತ್ರದ ರಿಲೀಸ್ ಡೇಟ್ ಪ್ರಕಟಿಸಿದ ಆದ ಬಳಿಕ RRR ಚಿತ್ರ ತಂಡ 2022 ಜನವರಿ 6ರಂದು ಚಿತ್ರವನ್ನು ರಿಲೀಸ್ ಮಾಡುವ ಬಗ್ಗೆ ಹೇಳಿಕೊಂಡಿದೆ.
ಎರಡು ಚಿತ್ರಗಳು ಒಂದೇ ದಿನಾಂಕಕ್ಕೆ ರಿಲೀಸ್ ಆದರೆ ಆಲಿಯಾ ಭಟ್ ಗಂಗೂಬಾಯಿ ಚಿತ್ರಕ್ಕೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ.ಮತ್ತೊಂದೆಡೆ RRR ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸುವುದರ ಜೊತೆಗೆ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಎರೆಡೂ ಸಿನಿಮಾಗಳೂ ಒಟ್ಟಿಗೆ ರಿಲೀಸ್ ಅದರೆ ತೊಡಕುಗಳು ಎದುರಾಗೋದ್ರಲ್ಲಿ ಡೌಟಿಲ್ಲ. ಹಾಗಾಗಿ RRR ಸಿನಿಮಾದ ಜೊತೆಗೆ ಸ್ಪರ್ಧೆ ಮಾಡುವ ಬದಲು ರಿಲೀಸ್ ದಿನಾಂಕವನ್ನೇ ಮುಂದೂಡಲಾಗಿದೆ.
‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರ ಈಗ 2022 ಫೆಬ್ರವರಿ 18ರಂದು ತೆರೆಗೆ ಬರಲು ನಿರ್ಧಾರ ಮಾಡಿದೆ. ಇನ್ನು ಈ ವಿಚಾರವಾಗಿ ನಿರ್ದೇಶಕ ರಾಜಮೌಳಿ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರತಂಡಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಧನ್ಯವಾದಗಳು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಗಂಗೂಬಾಯಿ ಚಿತ್ರಕ್ಕೂ ಶುಭಕೋರಿದ್ದಾರೆ.