ಬೆಂಗಳೂರಿನಲ್ಲಿ RRR ಸಿನಿಮಾದ ಹಾಡು ಲಾಂಚ್ – ಕನ್ನಡದಲ್ಲಿ ಮಾತನಾಡಿದ ರಾಜಮೌಳಿ
ಬೆಂಗಳೂರು : ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ , ತೆಲುಗಿನ ಎನೆರ್ಜೆಟಿಕ್ ನಟರಾದ ರಾಮ್ ಚರಣ್ ಹಾಗೂ ಜ್ಯೂ. NTR ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ RRR ಸಿನಿಮಾ ಸದ್ಯ ಪ್ರಚಾರ ಕಾರ್ಯವನ್ನ ಶುರು ಮಾಡಿ ಆಗಿದೆ.. ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ದಂಡೇ ಇದ್ದು, ಟೀಸರ್ , ಹಾಡುಗಳಿಂದಲೇ ಸೌಂಡ್ ಮಾಡ್ತಿದೆ..
ಈ ಬಿಗ್ ಬಜೆಟ್ ಸಿನಿಮಾದ ಪ್ರಚಾರ ಕೆಲಸವನ್ನ ಬೆಂಗಳೂರಿನಲ್ಲಿ ಶುರು ಮಾಡಿರುವ ರಾಜಮೌಳಿ ಟೀಮ್ RRR ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮ ನಡೆಸಿದ್ದಾರೆ. ಸಿನಿಮಾ ನಿರ್ದೇಶಕ ರಾಜಮೌಳಿ ಅವರು ಈ ವೇಳೆ ಸಿನಿಮಾ ಕುರಿತಾಗಿ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ.. ವಿಶೇಷ ಅಂದ್ರೆ ಈ ವೇಳೆ ರಾಜಮೌಳಿ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ..
ಎಲ್ಲರೂ ಚೆನ್ನಾಗಿದ್ದೀರಾ? ಎರಡು ವಿಷಯದಲ್ಲಿ ಕ್ಷಮಿಸಬೇಕು. ಒಂದು ಕನ್ನಡದಲ್ಲಿ ಅಷ್ಟಾಗಿ ಮಾತನಾಡಕ್ಕೆ ಬರಲ್ಲ, ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ನಾನೇ ಬಂದು ಮಾತನಾಡುತ್ತಿದ್ದೇನೆ. ಕರ್ನಾಟಕದಲ್ಲಿ ಮುಂದಿನ ತಿಂಗಳು ಗ್ರ್ಯಾಂಡ್ ಆಗಿ ಟ್ರೇಲರ್ ರಿಲೀಸ್ ಮಾಡಿ, ಎಲ್ಲರಿಗೂ ಸಂದರ್ಶನ ಕೊಡುತ್ತೇನೆ ಎಂದರು.
ಕಂಪ್ಲೀಟ್ ಟೀಮ್ ಜೊತೆಗೆ ಮುಂದಿನ ತಿಂಗಳು ಕರ್ನಾಟಕಕ್ಕೆ ಬರುತ್ತೇವೆ. ಆರ್‌ಆರ್‌ಆರ್ ಸಿನಿಮಾದಲ್ಲಿ ಎಲ್ಲಾ ಆ್ಯಕ್ಷನ್‍ಗಳು ಸೂಪರ್ ಆಗಿದೆ. ಎಮೋಷನಲ್ ದೃಶ್ಯಗಳು ತುಂಬಾ ಇದೆ. ಬ್ಯಾಂಗ್ ಗ್ರೌಂಡ್ ಮ್ಯೂಸಿಕ್ ಸಹ ಚೆನ್ನಾಗಿದೆ. ಇವತ್ತು ನಿಮ್ಮ ಜೊತೆ ಅನುಭವ ಶೇರ್ ಮಾಡಿದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.. ಸಾಂಗ್ ಲಾಂಚ್ ಬಳಿಕ ರಾಜಮೌಳಿ ಅವರು ಅಪ್ಪು ಮನೆಗೆ ತೆರಳಲಿದ್ದರು..
ಜನವರಿ 7ಕ್ಕೆ RRR ಸಿನಿಮಾ ರಿಲೀಸ್ ಆಗುತ್ತಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್ ತೆರೆಕಾಣುತ್ತಿದೆ..
ಕಮಲ್ ಹಾಸನ್ ಬದಲು “ಬಿಗ್ ಬಾಸ್” ನಿರೂಪಣೆ ಮಾಡ್ತಾರೆ ಈ ಸ್ಟಾರ್ ನಟಿ ಇವರೇ..!