ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ 10 ಸಾವಿರ ರೂಪಾಯಿ ಹಾಕಿ : ಜಮೀರ್
ಕೋಲಾರ : ರಾಜ್ಯ ಸರ್ಕಾರ ಆಟೋ ಚಾಲಕರಿಗೆ ನೀಡಿರುವ ಪರಿಹಾರ ನಾಮಕಾವಸ್ಥೆ, ಅದು ಅಪ್ ಲೋಡ್ ಮಾಡಲು ಅಪ್ಲಿಕೇಶನ್ ಓಪನ್ ಆಗ್ತಿಲ್ಲ.
ಅದಕ್ಕೆ ಬದಲಾಗಿ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ 10 ಸಾವಿರ ರೂಪಾಯಿ ಹಾಕಲಿ ಎಂದು ಮಾಜಿ ಸಚಿವ ಜಮೀರ್ ಅಹಮದ್ ಒತ್ತಾಯಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಘೋಷಣೆ ಮಾಡಿರುವ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯೆ ನೀಡಿದರು.
ರಾಜ್ಯ ಸರ್ಕಾರ ಆಟೋ ಚಾಲಕರಿಗೆ ನೀಡಿರುವ ಪರಿಹಾರ ನಾಮಕಾವಸ್ಥೆ, ಅದು ಅಪ್ ಲೋಡ್ ಮಾಡಲು ಅಪ್ಲಿಕೇಶನ್ ಓಪನ್ ಆಗ್ತಿಲ್ಲ.
ಅದಕ್ಕೆ ಬದಲಾಗಿ ಬಿಪಿಎಲ್ ಕಾರ್ಡ್ ಕುಟುಂಬದವರಿಗೆ 10 ಸಾವಿರ ರೂಪಾಯಿ ಹಾಕಲಿ ಎಂದು ಒತ್ತಾಯಿಸಿದರು.
ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ ಟೆಸ್ಟಿಂಗ್ ಕಡಿಮೆ ಮಾಡಿದ್ದಾರೆ. ಮೊದಲು ಎರಡುವರೆ ಲಕ್ಷ ಟೆಸ್ಟಿಂಗ್ ಮಾಡ್ತಿದ್ರು, ಈಗ 94 ಸಾವಿರ ಜನರ ಟೆಸ್ಟಿಂಗ್ ಮಾಡ್ತಿದ್ದಾರೆ.
ಕೊರೊನಾ ಹೋಗಲಾಡಿಸಲು ವ್ಯಾಕ್ಸಿನ್ ತೊಗೊಬೇಕು ಎಂದ್ರು, ಈಗ ನೋಡೊದ್ರೆ ವ್ಯಾಕ್ಸಿನ್ ಸಿಗ್ತಿಲ್ಲ.
ಜನರು ವ್ಯಾಕ್ಸಿನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದ ಜಮೀರ್ ಎಲ್ಲರೂ ವ್ಯಾಕ್ಸಿನ್ ಹಾಕಿಕೊಳ್ಳುವಂತೆ ಮನವಿ ಮಾಡಿದರು.
ದೇಶಕ್ಕೆ ಒಳ್ಳೆ ದಿನ ಬಂದಿಲ್ಲ, ಬಿಜೆಪಿ ನಾಯಕರಿಗೆ ಮಾತ್ರ ಒಳ್ಳೆ ದಿನ ಬಂದಿದೆ. ಪಿಎಂ ಅವರ ಸಾಬ್ ಕಾ ಸಾಥ್, ಸಾಬ್ ಕಾ ವಿಕಾಸ ಎಲ್ಲೂ ಆಗಿಲ್ಲ.
ಬಿಜೆಪಿಗೆ ಮತ ಹಾಕಿದ ಜನ್ರು ಬೀದಿ ಬೀದಿಯಲ್ಲಿ ಉಗಿತ್ತಾ ಇದ್ದಾರೆ. ಒಂದು ಕಡೆ ಕೊರೊನಾದಿಂದ ಜನ ಸಾಯುತ್ತಿದ್ದರೆ,ಮತ್ತೊಂದಡೆ ತೈಲ ಬೆಲೆ ಏರಿಕೆ ಆಗುತ್ತಿದೆ ಎಂದು ಮೋದಿ ವಿರುದ್ಧ ಕಿಡಿಕಾರಿದರು.









