ಚೆಟ್ಟಿನಾಡ್ ಸಮೂಹದಿಂದ 700 ಕೋಟಿ ರೂ. ತೆರಿಗೆ ವಂಚನೆ
ಚೆನ್ನೈ : ತೆರಿಗೆ ವಂಚನೆ ಆರೋಪದಡಿ ಚೆನ್ನೈ ಮೂಲದ ಚೆಟ್ಟಿನಾಡ್ ಗ್ರೂಪ್ ಗೆ ಸಂಬಂಧಿಸಿದ ಹಲವು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಚೆನ್ನೈ, ತಿರುಚ್ಚಿ, ಕೊಯಮತ್ತೂರು, ಆಂಧ್ರ, ಕರ್ನಾಟಕ ಮತ್ತು ಮುಂಬೈ ಸೇರಿದಂತೆ 60 ಕಡೆ ದಾಳಿ ನಡೆದಿದೆ. ದಾಳಿ ವೇಳೆ 700 ಕೋಟಿ ತೆರಿಗೆ ವಂಚನೆಯ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಈ ಹುಡುಕಾಟ ತಾತ್ಕಾಲಿಕವಾಗಿ ಮುಕ್ತಾಯಗೊಂಡಿದ್ದು, ಕಡತಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಹಿಂದೆ 2015ರಲ್ಲಿಯೂ ಚೆಟ್ಟಿನಾಡ್ ಗ್ರೂಪ್ ಮೇಲೆ ದಾಳಿ ನಡೆದಿತ್ತು.
ಇದನ್ನೂ ಓದಿ : ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
1912ರಲ್ಲಿ ಸ್ಥಾಪನೆಯಾದ ಚೆಟ್ಟಿನಾಡ್, ಚೆನ್ನೈಯಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದೆ. ಸುಮಾರು 100 ವರ್ಷಗಳಷ್ಟು ಹಳೆಯದಾದ ಚೆಟ್ಟಿನಾಡ್ ಸಮೂಹವು ಆರೋಗ್ಯ, ನಿರ್ಮಾಣ, ಸಿಮೆಂಟ್, ವಿದ್ಯುತ್, ಜವಳಿ ಮತ್ತು ಇತರ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ.
ವಾರ್ಷಿಕ 4,000 ಕೋಟಿ ರೂ.ಯಷ್ಟು ವಹಿವಾಟು ನಡೆಸುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel