ಹರಿಣಗಳ ವಿಶ್ವರೂಪ | ಟೀಂ ಇಂಡಿಯಾ 327ಕ್ಕೆ ಆಲೌಟ್ rsa-vs-ind saaksha tv
ಇಂಡೋ – ಆಫ್ರಿಕಾ ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ಹರಿಣಗಳು ಕಂಬ್ಯಾಕ್ ಮಾಡಿದ್ದಾರೆ. ಮೊದಲ ದಿನ ಅದ್ಭುತವಾಗಿ ಬ್ಯಾಟ್ ಬೀಸಿದ್ದ ಟೀಂ ಇಂಡಿಯಾ ಬ್ಯಾಟರ್ ಗಳು ಇಂದು ಸೌಂಡ್ ಮಾಡಲೇ ಇಲ್ಲ. ಕಗಿಸೋ ರಬಾಡ.. ಲುಂಗಿ ಎಂನ್ಗಿಡಿ ಬೌಲಿಂಗ್ ಅಬ್ಬರಕ್ಕೆ ತತ್ತರಿಸಿದ ಭಾರತ 327 ರನ್ ಗಳಿಗೆ ಆಲೌಟ್ ಆಗಿದೆ.
ಮೂರು ವಿಕೆಟ್ ಕಳೆದುಕೊಂಡು 272 ರನ್ ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇನ್ನಿಂಗ್ಸ್ ಆರಂಭದಿಂದಲೂ ಬೆಂಕಿ ಚೆಂಡುಗಳನ್ನ ಎಸೆದ ರಬಾಡ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ರಾಹುಲ್ ವಿಕೆಟ್ ಪಡೆದರು. ರಾಹುಲ್ 123 ರನ್ ಗಳಿಸಿದ್ರು. ಇಲ್ಲಿಂದ ಭಾರತೀಯ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು.
ಇದಾದ ಬಳಿಕ 48 ರನ್ ಗಳಿಸಿದ್ದ ರಹಾನೆ ಲುಂಗಿಗೆ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಭಾರತೀಯ ಬ್ಯಾಟರ್ ಗಳು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ಪಂತ್ 8 ರನ್ , ಅಶ್ವಿನ್, ಶರ್ದೂಲ್ ತಲಾ 4 ರನ್ , ಶಮಿ 8 ರನ್, ಬುಮ್ರಾ 14 ರನ್, ಸಿರಾಜ್ 4 ರನ್ ಗಳಿಸಿ ಔಟ್ ಆದ್ರು.
ಒಟ್ಟಾರೆ ಭಾರತ ಮೊದಲ ಇನ್ನಿಂಗ್ಗ್ ನಲ್ಲಿ 327 ರನ್ ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ ಪರ ಲುಂಗಿ ಎಂನ್ಗಿಡಿ ಆರು ವಿಕೆಟ್ ಪಡೆದು ಮಿಂಚಿದ್ರೆ, ಕಗಿಸೊ ರಬಾಡ 3 ವಿಕೆಟ್, ಜೇಸನ್ 1 ವಿಕೆಟ್ ಪಡೆದರು.









