rsa-vs-ind-2nd-odi | 2 ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ
ರಾಂಚಿ ವೇದಿಕೆಯಾಗಿ ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ರುತುರಾಜ್ ಗಾಯಕ್ವಾಡ್ ಬದಲಿಗೆ ರಜತ್ ಪಟಿದಾರ್ ಅವರಿಗೆ ಚಾನ್ಸ್ ನೀಡಲಾಗಿದೆ.
ಆ ಮೂಲಕ ಪಟಿದಾರ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ.
ಇನ್ನು ರವಿಬಿಷ್ಣೋಯಿ ಸ್ಥಾನದಲ್ಲಿ ಶಹಬ್ಬಾಶ್ ಅಹ್ಮದ್ ಕಣಕ್ಕಿಳಿದಿದ್ದಾರೆ.
ಭಾರತ ತಂಡ ಹೀಗಿದೆ
ಶಿಖರ್ ಧವನ್, ಶುಬ್ ಮನ್ ಗಿಲ್, ಇಶಾನ್ ಕಿಶಾನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ ಸನ್, ವಾಷಿಂಗ್ ಟನ್ ಸುಂದರ್, ಶಹಬ್ಬಾಶ್ ಅಹ್ಮದ್, ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್, ಮೊಹ್ಮದ್ ಸಿರಾಜ್, ಆವೇಶ್ ಖಾನ್
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್(ಡಬ್ಲ್ಯೂ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್(ಸಿ), ಜಾರ್ನ್ ಫೋರ್ಚುಯಿನ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ