ಕ್ಲೈಮ್ಯಾಕ್ಸ್ ತಲುಪಿದೆ ಬಾಕ್ಸಿಂಗ್ ಡೇ’ ಟೆಸ್ಟ್ RSA vs IND saaksha tv
ಬಾಕ್ಸಿಂಗ್ ಡೇ’ ಟೆಸ್ಟ್ ಕ್ಲೈಮ್ಯಾಕ್ಸ್ ತಲುಪಿದೆ. ಇನ್ನೂ 211 ರನ್ ಗಳಿಸಿದರೆ ದಕ್ಷಿಣ ಆಫ್ರಿಕಾ ತಂಡಕ್ಕೆ ಜಯ ಸಿಗಲಿದೆ. ಸಾಮಾನ್ಯವಾಗಿ ದಿನವಿಡೀ ಆಡಿದರೇ ಈ ಗುರಿ ಅಷ್ಟೆನೂ ಕಷ್ಟದ ಕೆಲಸವಲ್ಲ! ಆದರೆ ಆಫ್ರಿಕಾ ಕೈಯಲ್ಲಿ ಕೇವಲ 6 ವಿಕೆಟ್ ಗಳಿವೆ.
ಇತ್ತ ಭಾರತದ ವೇಗಿಗಳು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ.
ನಾಲ್ಕನೇ ದಿನದಲ್ಲಿ ನಮ್ಮ ಬೌಲರ್‌ಗಳನ್ನು ಎದುರಿಸಲು ಹೆಣಗಾಡುತ್ತಿದ್ದ ಆತಿಥೇಯ ತಂಡ ಗುರುವಾರ ಎಷ್ಟು ಹೊತ್ತು ಕ್ರೀಸ್ ನಲ್ಲಿ ನಿಲ್ಲತ್ತದೆ ಅನ್ನೋದು ಕುತೂಹಲಕಾರಿಯಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಹವಾಮಾನ ಇಲಾಖೆಯು ಕೊನೆಯ ದಿನ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮಳೆ ಬಾರದಿದ್ದರೆ ಭಾರತ ಗೆಲ್ಲುವ ಸಾಧ್ಯತೆಗಳು ಹೇರಳವಾಗಿದೆ.
ಗೆಲುವಿಗೆ 305 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ಬುಧವಾರದ ದಿನದಾಟದ ಮುಕ್ತಾಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 94 ರನ್ ಗಳಿಸಿದೆ.
ಗೆಲುವಿಗೆ 211 ರನ್‌ಗಳ ಅಂತರದಲ್ಲಿದೆ. ನಾಯಕ ಡೀನ್ ಎಲ್ಗರ್ 122 ಎಸೆತಗಳಲ್ಲಿ 52 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಇದಕ್ಕೂ ಮೊದಲು ಭಾರತ 16 ರನ್ ಗೆ 1 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನದಾಟ ಆರಂಭಿಸಿದ್ದ ಟೀಂ ಇಂಡಿಯಾ, 174 ರನ್‌ಗಳಿಗೆ ಆಲೌಟ್ ಆಗಿತ್ತು.
ಟಾರ್ಗೆಟ್ ಸೆಟ್ ಮಾಡುವ ನಿಟ್ಟಿನಲ್ಲಿ ಭಾರತ ವೇಗವಾಗಿ ಆಟವಾಡಲು ಯತ್ನಿಸಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿತ್ತು.
ಇದಾದ ಬಳಿಕ ಬ್ಯಾಟಿಂಗ್ ಗೆ ಬಂದ ಆಫ್ರಿಕಾಗೆ ಶಮಿ ಶಾಕ್ ನೀಡಿದರು. ಮಾರ್ಕ್ರಾಮ್ (1) ಕೀಗನ್ ಪೀಟರ್ಸನ್ (17) ವ್ಯಾನ್ ಡೆರ್ ದಾಸೆನ್ (11) ಕೇಶವ್ ಮಹಾರಾಜ್ (8) ರನ್ ಗಳಿಸಿ ಔಟ್ ಆದರು.