ಬೆಂಗಳೂರು: ಸುಳ್ಳು ಹೇಳುವುದೇ ಆರೆಸ್ಸೆಸ್, ಬಿಜೆಪಿ ಕೆಲಸ. ಆರ್.ಎಸ್.ಎಸ್ ಒಂದು ಜಾತಿ ಸಂಘಟನೆ ಎಂಬುದು ತಿಳಿದಿರಲಿ. ಅದನ್ನು ಸಮರ್ಥವಾಗಿ ಎದುರಿಸಲು ಇತಿಹಾಸ ತಿಳಿದುಕೊಂಡು ಕೆಲಸ ಮಾಡಬೇಕು. ಆರ್‍ಎಸ್‍ಎಸ್ ಹಿಂದೂ ಎಂದು ಹೇಳಲು ಬಂದರೆ, ನೀನೇ ಅಲ್ಲ ನಾವೂ ಹಿಂದೂಗಳೇ. ಕುಳಿತುಕೊಳ್ಳಿ ಸಾಕು ಅಂತ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‍ಎಸ್‍ಎಸ್ ಇರುದ್ಧ ವಾಗ್ದಾಳಿ ನಡೆಸಿದ್ದಾರೆ.
ದವರು ಕಿವಿಮಾತು ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನೆಹರೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನೆಹರೂ ಜಾತ್ಯತೀತವಾದಿ ಆದ್ದರಿಂದ ಅವರನ್ನು ಬಿಜೆಪಿಯವರು ವಿರೋಧ ಮಾಡುತ್ತಾರೆ. ದೇಶಪ್ರೇಮಿ ಭಗತ್ ಸಿಂಗ್ ಅವರಿಗೂ ಬಿಜೆಪಿಗೂ ಸಂಬಂಧ ಇಲ್ಲ. ವಿವೇಕಾನಂದರಿಗೂ ಬಿಜೆಪಿಗೂ, ಆರ್‍ಎಸ್‍ಎಸ್‍ಗೂ ಸಂಬಂಧವೇ ಇಲ್ಲ. ಈಗ ಅವರೆಲ್ಲರ ಫೋಟೋ ಹಾಕಿಕೊಂಡು ಸಂಘ ಪರಿವಾರದವರು ರಾಜಕಾರಣ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಕುಟುಕಿದರು.
ಸಂವಿಧಾನ ಇವತ್ತು ಗಟ್ಟಿಯಾಗಿ ಇರಲು ಜವಾಹರಲಾಲ್ ನೆಹರೂ ಅವರೇ ಕಾರಣ. ನೆಹರೂ ಇಲ್ಲದೇ ಪ್ರಪಂಚದ ಇತಿಹಾಸ ಪೂರ್ಣವಾಗಲ್ಲ. ಹೀಗಂತ ನೆಹರೂ ಹೇಳಿ ಬರೆಸಿದ್ದು ಅಲ್ಲ. ವಿದೇಶೀ ಬರಹಗಾರರು ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಸಂಘ ಪರಿವಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಕಾಂಗ್ರೆಸ್‍ನಲ್ಲಿ ಇದ್ದು ಹೋಗಿ ಆರೆಸ್ಸೆಸ್ ಕಟ್ಟಿದ್ದು. ಸ್ವಾತಂತ್ರ್ಯ ಬಂದ ಮೇಲೆ ಬಿಜೆಪಿ ಹುಟ್ಟಿಕೊಂಡಿದ್ದು. ಹೆಡಗೇವಾರ್ ಅಂಥವರು ನಮ್ಮ ದೇಶದ ಪ್ರಧಾನಿ ಆಗಿದ್ದರೆ ದೇಶದಲ್ಲಿ ರಕ್ತ ಹರಿಯುತ್ತಿತ್ತು ಎಂದ ಸಿದ್ದರಾಮಯ್ಯ, ಭಾರತ ಕಂಡ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದರೆ ಅದು ಮೋದಿ ಮಾತ್ರ ಎಂದು ವ್ಯಂಗ್ಯವಾಡಿದರು.
ನೆಹರೂ ಸೇರಿ ಕಾಂಗ್ರೆಸ್ ನಾಯಕರು ಕೈಗಾರಿಕೆಗೆ ಒತ್ತು ಕೊಟ್ಟಿದ್ದರು. ಈಗಿನ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿ ಬದಲು ಸಣ್ಣ ಕೈಗಾರಿಕೆಗಳನ್ನ ಸರ್ವನಾಶ ಮಾಡಿದೆ. ಈಗ ಬಿಎಸ್‍ಎನ್‍ಎಲ್‍ನ್ನು ಮುಚ್ಚಿದ್ದರೆ, ಭಾರತೀಯ ರೈಲ್ವೆಯನ್ನೂ ಖಾಸಗಿಯವರಿಗೆ ಕೊಡುತ್ತಿದ್ದಾರೆ. ಇನ್ನೂ ಹಲವು ಕೈಗಾರಿಕೆಗಳನ್ನ ಮುಚ್ಚಿಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಖಂಡಿಸಿದರು.
ಆರ್‍ಎಸ್‍ಎಸ್‍ನ ಗೋಳ್ವಾಲ್ಕರ್, ಆ ವೋಳ್ಕರ್, ಈ ವೋಳ್ಕರ್ ಅವರೆಲ್ಲಾ ಸೇರಿ ಬ್ರಿಟಿಷ್ ಪರ ಕೆಲಸ ಮಾಡಿದರು. ಉದ್ಯೋಗ ತೆಗೆದುಕೊಳ್ಳಿ, ಸ್ವಾತಂತ್ರ್ಯ ಹೋರಾಟ ಮಾಡಬೇಡಿ ಎಂದು ನಾಗಪುರ ಸೇರಿದಂತೆ ಹಲವು ಕಡೆ ಸಭೆ ನಡೆಸಿದರು. ಇಂಥವರು ಇಂದು ದೇಶಭಕ್ತಿ ಬಗ್ಗೆ ನಮಗೆ ಹೇಳುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel