RSS ಬ್ಯಾನ್ : ಸಿದ್ದು ಮಾತಿಗೆ ಸೋಮಶೇಖರ್ ಕಿಡಿ
ಮೈಸೂರು : ಸಿದ್ದರಾಮಯ್ಯಗೆ ಏನ್ ಮಾತನಾಡುತ್ತಿದ್ದಾರೆ ಅನ್ನೋದು ಗೊತ್ತಾಗಲ್ಲ. ಆರ್ ಎಸ್ಎಸ್ ಬ್ಯಾನ್ ಮಾಡುವ ಅಗತ್ಯ ಇಲ್ಲ. ಅವರೇನು ದೇಶದ್ರೋಹಿ ಕೆಲಸ ಮಾಡ್ತಾರಾ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಆರ್ ಎಸ್ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯಗೆ ಏನ್ ಮಾತನಾಡುತ್ತಿದ್ದಾರೆ ಅನ್ನೋದು ಗೊತ್ತಾಗಲ್ಲ.
ಆರ್ ಎಸ್ಎಸ್ ಬ್ಯಾನ್ ಮಾಡುವ ಅಗತ್ಯ ಇಲ್ಲ. ಅವರೇನು ದೇಶದ್ರೋಹಿ ಕೆಲಸ ಮಾಡ್ತಾರಾ.?
ಆರ್ ಎಸ್ಎಸ್ ಏನ್ ಕೆಲಸ ಮಾಡುತ್ತೆ, ಪಿಎಫ್ಐ ಏನ್ ಕೆಲಸ ಮಾಡುತ್ತೆ ಅನ್ನುವುದನ್ನು ಎಲ್ಲರಿಗೂ ಗೊತ್ತಿದೆ.
ಆರ್ ಎಸ್ಎಸ್ ದೇಶಭಕ್ತಿ ಕೆಲಸ ಮಾಡುತ್ತೆ. ಪಿಎಫ್ಐ ದೇಶದ್ರೋಹಿ ಕೆಲಸ ಮಾಡುತ್ತೆ. ಆರ್ ಎಸ್ಎಸ್ ಬ್ಯಾನ್ ಮಾಡುವ ಪ್ರಮೇಯವೇ ಇಲ್ಲ ಎಂದು ತಿಳಿಸಿದ್ದಾರೆ.
ಇನ್ನು ಭಾರತ್ ಜೋಡೋ ಯಾತ್ರೆಯಿಂದ ದಸರಾ ಕಾರ್ಯಕ್ರಮಕ್ಕೆ ತೊಂದರೆ ವಿಚಾರವಾಗಿ ಮಾತನಾಡಿದ ಸೋಮಶೇಖರ್, ಈಗಾಗಲೇ ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ.
ಭಾರತ್ ಜೋಡೋ ಯಾತ್ರೆಯಿಂದ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದ್ದೇವೆ. ಪೊಲೀಸರು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಟ್ರಾಫಿಕ್ ಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.