RSS & ಬಿಜೆಪಿಯ ರಾಷ್ಟ್ರವಾಧಿಗಳಲ್ಲ, ರಾಷ್ಟ್ರವ್ಯಾಧಿಗಳು
ಬೆಂಗಳೂರು : ಹರ್ ಘರ್ ತಿರಂಗಾ’ ಎನ್ನುತ್ತಾ ಜನರ ಮನೆಯ ಮೇಲೆ ತಿರಂಗಾ ಹಾರಿಸಲು ಕರೆ ಕೊಟ್ಟಿರುವ ಪ್ರಧಾನಿ, ತಮ್ಮ ಮೂಲ ಮನೆಯಾದ ನಾಗಪುರದ RSS ಕಛೇರಿಯಲ್ಲೇ ತಿರಂಗಾ ಹಾರಿಸಲು ಸಾಧ್ಯವಾಗಲಿಲ್ಲ. ಅವರ ಬಿಜೆಪಿ ಪಕ್ಷದಲ್ಲಿ ಕ್ವಿಟ್ ಇಂಡಿಯಾ ದಿನ ಆಚರಿಸಲಿಲ್ಲ. RSS & ಬಿಜೆಪಿಯ ರಾಷ್ಟ್ರವಾಧಿಗಳಲ್ಲ, ರಾಷ್ಟ್ರವ್ಯಾಧಿಗಳು ಎಂಬುದು ಅನಾವರಣವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ಕ್ವಿಟ್ ಇಂಡಿಯಾ ಚಳವಳಿಯನ್ನು ಸಾವರ್ಕರ್ ವಿರೋಧಿಸಿದ್ದರು. ಚಳವಳಿ ಆರಂಭವಾದಾಗ ಸಂಘಪರಿವಾರ ಬ್ರಿಟಿಷರ ಗುಲಾಮಗಿರಿಯನ್ನು ಅತಿಯಾಗಿ ಮಾಡಲಾರಂಭಿಸಿತ್ತು. ತಮ್ಮ ಪೂರ್ವಜರ ದೇಶದ್ರೋಹದ ಪರಂಪರೆಯನ್ನು ಮುಂದುವರೆಸಲೆಂದೇ ಬಿಜೆಪಿ ಕಚೇರಿಯಲ್ಲಿ ‘ಕ್ವಿಟ್ ಇಂಡಿಯಾ ದಿನ’ ಆಚರಿಸದೆ ತನ್ನೊಳಗಿದ್ದ ದೇಶವಿರೋಧಿ ವಿಕೃತಿಯನ್ನು ಕಾರಿಕೊಂಡಿದೆ.
ಕ್ವಿಟ್ ಇಂಡಿಯಾ ಚಳವಳಿಯನ್ನು ಸಾವರ್ಕರ್ ವಿರೋಧಿಸಿದ್ದರು.
ಚಳವಳಿ ಆರಂಭವಾದಾಗ ಸಂಘಪರಿವಾರ ಬ್ರಿಟಿಷರ ಗುಲಾಮಗಿರಿಯನ್ನು ಅತಿಯಾಗಿ ಮಾಡಲಾರಂಭಿಸಿತ್ತು.
ತಮ್ಮ ಪೂರ್ವಜರ ದೇಶದ್ರೋಹದ ಪರಂಪರೆಯನ್ನು ಮುಂದುವರೆಸಲೆಂದೇ @BJP4Karnataka ಕಚೇರಿಯಲ್ಲಿ 'ಕ್ವಿಟ್ ಇಂಡಿಯಾ ದಿನ' ಆಚರಿಸದೆ ತನ್ನೊಳಗಿದ್ದ ದೇಶವಿರೋಧಿ ವಿಕೃತಿಯನ್ನು ಕಾರಿಕೊಂಡಿದೆ.
— Karnataka Congress (@INCKarnataka) August 9, 2022
ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಅಭೂತಪೂರ್ವ ಜನಬೆಂಬಲ, ಕಾಂಗ್ರೆಸ್ ಆಯೋಜಿಸಿರುವ #FreedomMarch ಗೆ ಸಿಗುತ್ತಿರುವ ಅಪರಿಮಿತ ಯಶಸ್ಸನ್ನು ಕಂಡ ಬಿಜೆಪಿ ಕಂಗಾಲಾಗಿ ಹೋಗಿದೆ. ಚುನಾವಣೆಗೆ ಹೋಗಲು ಮುಖವಿಲ್ಲದ ಕಾರಣ ಸಿಎಂ ಕುರ್ಚಿಯಲ್ಲಿ ಬೇರೆ #PuppetCM ಕೂರಿಸಲು ಕಸರತ್ತು ನಡೆಸುತ್ತಿದೆ ಬಿಜೆಪಿ ಎಂದು ವ್ಯಂಗ್ಯವಾಡಿದೆ.
ಬೊಮ್ಮಾಯಿಯವರ ಆಡಳಿತದಲ್ಲಿ 'ಆಕ್ಷನ್' ಇಲ್ಲದಕ್ಕೆ ಸಿಎಂ ಬದಲಾವಣೆಯ 'ರಿಯಾಕ್ಷನ್' ಸೃಷ್ಟಿಯಾಗಿದೆ!
ಪ್ರವೀಣ್ ಹತ್ಯೆ,
ಕಾರ್ಯಕರ್ತರ ರಾಜೀನಾಮೆ,
ಬಲಪಂತೀಯ ಸಂಘಟನೆಗಳ ಆಕ್ರೋಶ,
ಗೃಹಸಚಿವರ ಮನೆ ಮೇಲೆ ದಾಳಿ,ಎಲ್ಲವೂ @BJP4Karnataka ಒಳಗಿನ ಅತೃಪ್ತ ಆತ್ಮಗಳ ಕುರ್ಚಿ ಕಸಿಯುವ ಪೂರ್ವನಿಯೋಜಿತ ಕೃತ್ಯಗಳಾಗಿರಬಹುದೇ @BSBommai ಅವರೇ?#PuppetCM
— Karnataka Congress (@INCKarnataka) August 9, 2022
ಬೊಮ್ಮಾಯಿಯವರ ಆಡಳಿತದಲ್ಲಿ ‘ಆಕ್ಷನ್’ ಇಲ್ಲದಕ್ಕೆ ಸಿಎಂ ಬದಲಾವಣೆಯ ‘ರಿಯಾಕ್ಷನ್’ ಸೃಷ್ಟಿಯಾಗಿದೆ! ಪ್ರವೀಣ್ ಹತ್ಯೆ, ಕಾರ್ಯಕರ್ತರ ರಾಜೀನಾಮೆ, ಬಲಪಂತೀಯ ಸಂಘಟನೆಗಳ ಆಕ್ರೋಶ, ಗೃಹಸಚಿವರ ಮನೆ ಮೇಲೆ ದಾಳಿ, ಎಲ್ಲವೂ ಬಿಜೆಪಿ ಒಳಗಿನ ಅತೃಪ್ತ ಆತ್ಮಗಳ ಕುರ್ಚಿ ಕಸಿಯುವ ಪೂರ್ವನಿಯೋಜಿತ ಕೃತ್ಯಗಳಾಗಿರಬಹುದೇ ಬಸವರಾಜ ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಿದೆ.








