ಆರ್‌ಬಿಐ ನಿಂದ ಸಿಹಿ ಸುದ್ದಿ – ದಿನದ 24 ಗಂಟೆಯೂ ಗ್ರಾಹಕರಿಗೆ ಆರ್‌ಟಿಜಿಎಸ್ ಸೇವೆ
ಹೊಸದಿಲ್ಲಿ, ಡಿಸೆಂಬರ್11: ಹೆಚ್ಚು ಮೌಲ್ಯದ ಹಣ ವರ್ಗಾವಣೆ ವ್ಯವಸ್ಥೆಯಾದ ಆರ್‌ಟಿಜಿಎಸ್ ಸೇವೆಯು ಡಿಸೆಂಬರ್ 14ರ ಮಧ್ಯರಾತ್ರಿಯಿಂದ ದಿನದ 24 ಗಂಟೆಯೂ ಗ್ರಾಹಕರಿಗೆ ಲಭ್ಯವಾಗಲಿದೆ.

ಇದರೊಂದಿಗೆ ಭಾರತವು ಈ ವ್ಯವಸ್ಥೆ ಜಾರಿ ಮಾಡಿದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಡಿಸೆಂಬರ್14ರ ಮಧ್ಯರಾತ್ರಿ 12.30ರಿಂದ ವರ್ಷಪೂರ್ತಿ ಆರ್‌ಟಿಜಿಎಸ್ ಸೇವೆಯನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಬುಧವಾರ ಆರ್‌ಬಿಐ ಘೋಷಣೆ ಮಾಡಿದೆ.
ಕೆಪಿಎಸ್ಸಿ ನೇಮಕಾತಿ 2020 – ಎಸಿಎಫ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಕಡಿಮೆ ಪ್ರಮಾಣದ ಹಣ ವರ್ಗಾವಣೆಗೆ ಪ್ರಸಿದ್ಧಿಯಾದ ನೆಫ್ಟ್ ಸೇವೆಯನ್ನು ದಿನದ 24 ಗಂಟೆ ವಿಸ್ತರಿಸಿದ ಬಳಿಕ ಆರ್‌ಟಿಜಿಎಸ್ ಸೇವೆಯನ್ನು ಸಹ 24 ಗಂಟೆ ವಿಸ್ತರಿಸಿದ ಹೆಗ್ಗಳಿಕೆಗೆ ಆರ್‌ಬಿಐ ಪಾತ್ರವಾಗಿದೆ.

ಇದರ ಜೊತೆಗೆ ಕೇಂದ್ರ ಬ್ಯಾಂಕ್ ಸಂಪರ್ಕ ರಹಿತ ಕಾರ್ಡ್ ಪಾವತಿ (ಪಿನ್ ನಂಬರ್ ನಮೂದಿಸದೆ ಕಾರ್ಡ್ ಮೂಲಕ ಹಣ ಪಾವತಿ) ಹಾಗೂ ಯುಪಿಐ ಪಾವತಿ ಮಿತಿಯನ್ನು ಈಗಿರುವ 2,000 ರೂಪಾಯಿಗಳಿಂದ 5,000 ರೂಪಾಯಿಗಳಿಗೆ ಏರಿಕೆ ಮಾಡಿದೆ. ಇದು 2021ರ ಜನವರಿ 1 ರಿಂದ ಜಾರಿಗೆ ಬರಲಿದ್ದು, ಈ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಳಿಗಾಲದಲ್ಲಿ ಅಗತ್ಯವಾಗಿ ಸೇವಿಸಬೇಕಾದ ಸೂಪರ್‌ಫುಡ್‌ಗಳುhttps://t.co/0cgV3uCy8H
— Saaksha TV (@SaakshaTv) December 9, 2020
ಹಿಂದೂ, ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಮದುವೆ ಮಾಡಿಸಿ ಚೀನಾಕ್ಕೆ ಮಾರಾಟ ಮಾಡುತ್ತಿರುವ ಪಾಕಿಸ್ತಾನhttps://t.co/Rbj3NH9Moa
— Saaksha TV (@SaakshaTv) December 10, 2020








