ಬೆಂಗಳೂರು : ದ್ವಿತೀಯ ಪಿಯುಸಿ (PUC) ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತೊಂದು ನಿಯಮ ಜಾರಿಗೆ ತಂದಿದೆ.
ಪರೀಕ್ಷೆ (Exam) ಬರೆಯಲು ವಿದ್ಯಾರ್ಥಿಗಳಿಗಿದ್ದ ನಿಗದಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ನಿಯಮದ ಕುರಿತು ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ. ಹೊಸ ನಿಯಮ ಈ ವರ್ಷದ ಅಂದರೆ 2024-25ನೇ ಸಾಲಿನ ಪರೀಕ್ಷೆಯಿಂದಲೇ ಜಾರಿ ಆಗಲಿದೆ. ಹೀಗಾಗಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ.
ಈ ಮೊದಲು ವಿದ್ಯಾರ್ಥಿಗಳು ಉತ್ತರ ಬರೆಯಲು 3 ಗಂಟೆ 15 ನಿಮಿಷ ಸಮಯ ಕೊಡಲಾಗುತ್ತಿತ್ತು. 3 ಗಂಟೆ ಉತ್ತರ ಬರೆಯಲು ಮತ್ತು 15 ನಿಮಿಷಗಳು ಪ್ರಶ್ನೆ ಪತ್ರಿಕೆ ಓದಲು ನೀಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಮಯ ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗಿದೆ. 15 ನಿಮಿಷ ಸಮಯವನ್ನು ಕಡಿತ ಮಾಡಲಾಗಿದೆ.
ಅಲ್ಲದೇ, ಈ ಸಮಯ ಬದಲಾವಣೆಗೆ ಕಾರಣ ನೀಡಲಾಗಿದೆ. ಮೊದಲು 3 ಗಂಟೆ 15 ನಿಮಿಷ ಇದ್ದ ಸಮಯದಲ್ಲಿ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಕೊಡಲಾಗಿತ್ತಿತ್ತು. ಆದರೆ ಈಗ 70/80 ಅಂಕಗಳಿಗೆ ಲಿಖಿತ ಪರೀಕ್ಷೆ ಇದ್ದು,ಉಳಿದ ಅಂಕಗಳು ಇಂಟರ್ನಲ್ ಗೆ ನೀಡಲಾಗುತಿದೆ. ಹೀಗಾಗಿ 15 ನಿಮಿಷ ಉತ್ತರ ಬರೆಯಲು ಕಡಿತ ಮಾಡಲಾಗಿದೆ.