ನವೆಂಬರ್ 26, 2025 ರಂದು, ಜೈಲಿನಲ್ಲಿ ಇಮ್ರಾನ್ ಖಾನ್ ಮರಣ ಹೊಂದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳಿಂದ ದೇಶ–ವಿದೇಶಗಳಲ್ಲಿ ಆತಂಕ ಮನೆ ಮಾಡಿದೆ.
ಈ ಮಧ್ಯೆ, ಖಾನ್ ಅವರನ್ನು ನೋಡಲು ಜೈಲಿಗೆ ಬಂದ ಅವರ ಮೂವರು ಸಹೋದರಿಯರನ್ನು ಪೊಲೀಸರು ತಡೆದಿದ್ದಾರೆ. ಅಷ್ಟೇ ಅಲ್ಲ ಅವರ ಜೊತೆ ಪೊಲೀಸರು ದೌರ್ಜನ್ಯಭರಿತ ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ, ಖಾನ್ ಬೆಂಬಲಿಗರು ಜೈಲಿನ ಹೊರಗೆ ಆಕ್ರೋಶ ಸೂಚಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಿನಿಸ್ಟ್ರಿ ಆಫ್ ಫಾರಿನ್ ಅಫೇರ್ಸ್, ಬಲೂಚಿಸ್ತಾನ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳು ಇಮ್ರಾನ್ ಖಾನ್ ಅನ್ನು ಜೈಲಿನಲ್ಲಿ ಕೊಲ್ಲಲಾಗಿದೆ ಎಂದು ವರದಿ ಮಾಡಿವೆ.
ಆದರೆ, ಇದುವರೆಗೆ ಇಮ್ರಾನ್ ಖಾನ್‌ನ ಮರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ವರದಿಯಾಗಿಲ್ಲ.
ಈ ಹಿನ್ನೆಲೆ, ಪಾಕಿಸ್ತಾನದಲ್ಲಿ ರಾಜಕೀಯ ಉದ್ರಿಕ್ತತೆ ಮತ್ತೆ ಮರುಜ್ಜೀವಗೊಂಡಿದೆ. ಇಮ್ರಾನ್ ಖಾನ್ ಅವರು 2023ರ ಆಗಸ್ಟ್ ನಿಂದ ಜೈಲಿನಲ್ಲಿದ್ದಾರೆ. ಇದೀಗ ಜೈಲಿನಲ್ಲಿ ಅವರ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಅವರ ಪಕ್ಷದ ನಾಯಕರು ಹಾಗೂ ಬೆಂಬಲಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಖಾನ್ ಬೆಂಬಲಿಗರು ಮತ್ತು ಅವರ ಕುಟುಂಬದವರು ಸುರಕ್ಷತೆಯನ್ನು ಕೇಳುತ್ತಿರುವಾಗ, ಜೈಲಿನಲ್ಲಿ ಇದ್ದವರ ಸ್ಥಿತಿ ಬಗ್ಗೆ ಸ್ಪಷ್ಟತೆ ಇಲ್ಲದೆ ಇರುವುದು ಭಯ, ಗೊಂದಲ ಮೂಡಿಸಿದೆ.








